ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳಲ್ಲೂ ಇಂಗ್ಲಿಷ್ ವ್ಯಾಮೋಹ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಗರಗಳು ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲೂ ತಾಯಂದಿರು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿದ್ದು, ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಆಸಕ್ತಿ ತೋರುತ್ತಿರುವುದರಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ~ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ವಿಷಾದಿಸಿದರು.

ಸೃಷ್ಟಿಶಕ್ತಿ ಸಂಸ್ಥೆಯು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶನಿವಾರ ನಗರದ ಕನ್ನಡ ಭವನದ `ನಯನ~ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ      `ಕರ್ನಾಟಕ ವೈಭವ~ ಕಾರ್ಯಕ್ರಮದಲ್ಲಿ ಮಾತನಾಡಿದರು.

`ಬೆಳಗಾವಿಯಲ್ಲಿ ಕನ್ನಡ ಉಳಿದಿದೆ ಎಂದರೆ ಅದಕ್ಕೆ ಅಲ್ಲಿನ ಹೆಣ್ಣುಮಕ್ಕಳೇ ಕಾರಣ. ಆದರೆ ಈಚಿನ ವರ್ಷಗಳಲ್ಲಿ ಕನ್ನಡ ಬಳಕೆ ಕ್ಷೀಣವಾಗುತ್ತಿದೆ. ಬೆಂಗಳೂರಿನಲ್ಲೂ ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿದ್ದು, ಇದೇ ರೀತಿ ಮುಂದುವರಿದರೆ ಕನ್ನಡವನ್ನು ಹುಡುಕಬೇಕಾಗುತ್ತದೆ~ ಎಂದರು.

`ಕನ್ನಡ ಶಾಲೆಯ ಬಹುಪಾಲು ಮಕ್ಕಳಿಗೂ ಕನ್ನಡ ಅಂಕಿಗಳ ಬಳಕೆ ಗೊತ್ತಿಲ್ಲ. ಹೀಗಿರುವಾಗ ಕನ್ನಡ ಬೆಳೆಯುವುದಾದರೂ ಹೇಗೆ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಸರ್ಕಾರದ ಜತೆಗೆ ಸಮಾಜದ ಹೊಣೆಗಾರಿಕೆ ಕೂಡ ಇದೆ ಎಂಬುದನ್ನು ಅರಿಯಬೇಕು~ ಎಂದು ಹೇಳಿದರು.

ಕಾಸರಗೋಡಿನ ಶ್ರೀ ಕೃಷ್ಣಧಾಮದ ಸಂಸ್ಥಾಪಕ ಕೆ.ಟಿ.ಜೋಯಿಸ್, `ಪ್ರಶಸ್ತಿ ಪಡೆಯುವ ಉದ್ದೇಶದಿಂದ ಸೇವಾ ಕಾರ್ಯದಲ್ಲಿ ತೊಡಗಬಾರದು. ಪ್ರಶಸ್ತಿಗಳೇ ಸಾಧನೆಯನ್ನು ಅರಸಿ ಬರುವಂತಿರಬೇಕು. ಸಾಧಕರು ಇತರರಿಗೆ ಮಾದರಿಯಾಗಿರಬೇಕು~ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗಣ್ಯರಿಗೆ      `ಕರ್ನಾಟಕ ಬಸವ ಜ್ಯೋತಿ~ ಪ್ರಶಸ್ತಿ ನೀಡಲಾಯಿತು.

ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಹಿರಿಯ ಕಲಾವಿದ ಕುಣಿಗಲ್ ನಾಗಭೂಷಣ್ ಹಾಗೂ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT