ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಠಾಣಾ ನೋಂದಣಿ: ಕೋರ್ಟ್‌ ಆದೇಶ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ನಿವೇಶನ ನೋಂದಣಿ ಮಾಡಿಸಲು, ಫಾರ್ಮ್‌ 9 ಮತ್ತು 11 ಬಳಸಿ ಸಲ್ಲಿಸಿದ ದಾಖಲೆಗಳನ್ನು
ಉಪ ನೋಂದಣಾಧಿಕಾರಿ ಪರಿಗಣಿಸಬೇಕು ಎಂದು ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ನಿರ್ದೇಶನ ನೀಡಿದೆ.

ಬೆಂಗಳೂರಿನ ಹೆಸರಘಟ್ಟದ ಹೇಮಂತ್‌ ಕುಮಾರ್‌ ಮತ್ತು ಎಂ. ಸುರೇಶ್‌ ಎಂಬುವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ ಅವರು ಈ ನಿರ್ದೇಶನ ನೀಡಿದರು. ಅರ್ಜಿದಾರರು ಫಾರ್ಮ್‌ 9 ಮತ್ತು 11 ಬಳಸಿ ದಾಖಲೆ ಸಲ್ಲಿಸಿದರೆ ಅದನ್ನು ಪರಿಗಣಿಸಬೇಕು. ಮಧ್ಯಂತರ ನಿರ್ದೇಶನವು ಈ ಅರ್ಜಿಗೆ ಸಂಬಂಧಿಸಿದಂತೆ ತಾನು ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ನಿವೇಶನ ನೋಂದಣಿಗೆ ಫಾರ್ಮ್‌ 9ಎ ಮತ್ತು 11ಎ ಇ–ಖಾತಾ ಮೂಲಕವೇ ದಾಖಲೆಗಳನ್ನು ನೀಡಬೇಕು ಎಂದು ಹೆಸರಘಟ್ಟದ ಉಪ ನೋಂದಣಾಧಿಕಾರಿಯವರು ಹೇಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಅರ್ಜಿದಾರರು ದೂರಿದ್ದರು. ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT