ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾಂತರಕ್ಕೂ ತಲುಪಿದ ಅಣ್ಣಾ ಪರ ಹೋರಾಟ

Last Updated 18 ಆಗಸ್ಟ್ 2011, 10:00 IST
ಅಕ್ಷರ ಗಾತ್ರ

ಕುಕನೂರು /ಕುಷ್ಟಗಿ: ದೇಶ ಭಕ್ತ, ಭೃಷ್ಟಾಚಾರ ವಿರೋಧಿ ಆಂದೋಲನದ ಮುಖ್ಯಸ್ಥ ಅಣ್ಣಾ ಹಜಾರೆ ಅವರನ್ನು ಬಂಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಅಣ್ಣಾ ಹಜಾರೆ ಅವರ ನೂರಾರು ಅಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಪ್ರಜ್ಞಾವಂತ ನಾಗರಿಕರು ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯತಿ ಕಾರ‌್ಯಾಲಯದಲ್ಲಿ ಆವರಣದಲ್ಲಿ ಜಮಾಯಿಸಿದ ಅಣ್ಣಾ ಅಭಿಮಾನಿಗಳು, ಅಲ್ಲಿಂದ ಪ್ರಮುಖ ಬೀದಿಯಲ್ಲಿ ಅಣ್ಣಾ ಹಜಾರೆ ಅವರನ್ನು ಬಂಧು ಮುಕ್ತಗೊಳಿಸಬೇಕು, ಪ್ರಬಲ ಜನಲೋಕಪಾಲ ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಭೃಷ್ಟಾಚಾರ ವಿರುದ್ಧ ಹಲವಾರು ಘೋಷಣೆಗಳನ್ನು ಕೂಗುತ್ತ, ಶಿರೂರ ವೀರಭದ್ರಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು.

ಮಂಜುನಾಥ ನಾಡಗೌಡ್ರ ಹಾಗೂ ಬಿ.ಆರ್.ತಾಸೀನ್ ಸಿರಾಜುದ್ದೀನ ಕರಮುಡಿ, ಮಂಜುನಾಥ ಕಳ್ಳಿಮನಿ, ರಾಮಚಂದ್ರ ಖಂಡೆ, ಕಳಕುಸಾ ಸಾವಜಿ, ಮಲ್ಲಿಕಾರ್ಜುನ ಗುಳಗಣ್ಣವರ, ಖಾಜಾವಲಿ ಮುಬಾರಕ್, ಮೌಲಾಸಾಬ ಮಕಾಂದಾರ, ಮಹಾಂತೇಶ ಹೂಗಾರ, ಬಸವರಾಜ ಉಪ್ಪಾರ,
 
ಮುಖಂಡರಾದ ದ್ಯಾಮಣ್ಣ ಜಮಖಂಡಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕರಬಸಯ್ಯ ಬಿನ್ನಾಳ, ಮಲ್ಲಿಕಾರ್ಜುನ ಸೋಬಾನದ, ಬಸವನಗೌಡ ತೊಂಡಿಹಾಳ, ಜೋಡಪ್ಪ ಯತ್ನಟ್ಟಿ ಸೇರಿದಂತೆ ಹಲವಾರು ಪ್ರಜ್ಞಾವಂತ ನಾಗರಿಕರು, ವಿದ್ಯಾನಂದ ಗುರುಕುಲ    ಪದವಿ ಪೂರ್ವ ಕಾಲೇಜು, ಡಾ.ಜಿ.ಎಸ್.ಮೇಲ್ಕೋಟೆ ಪಾಲಿಟೆಕ್ನಿಕ್, ಎ.ಬಿ.ಹೊಸಮನಿ ಪದವಿ ಕಾಲೇಜು, ಕೆ.ಎಲ್.ಇ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಐ.ಟಿ.ಐ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೀದಿಗಿಳಿದ ವಿದ್ಯಾರ್ಥಿಗಳು
ಕುಷ್ಟಗಿ:
ಬಲಿಷ್ಟ ಜನಲೋಕಪಾಲ ಮಸೂದೆ ಮಂಡನೆಗೆ ಒತ್ತಾಯಿಸಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಟ್ಟಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಬಂಧಿಸಿ ಸೆರೆಮನೆಗೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಪಟ್ಟಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಬುಧವಾರ ಇಲ್ಲಿ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟಾ ರ‌್ಯಾಲಿ ನಡೆಸಿದವು.

ಕಾಂಗ್ರೆಸ್ ಪಕ್ಷ ಹೊರತುಪಡಿಸಿ ನಡೆದ ಪ್ರತಿಭಟನೆಯಲ್ಲಿ ಇತರೆ ಪಕ್ಷಗಳ ಮುಖಂಡರು, ಪ್ರಾಂತ ರೈತ ಸಂಘ, ಜಯಕರ್ನಾಟಕ ಸಂಘಟನೆ, ಕರವೇ ಬಣಗಳ, ಕನ್ನಡ ಸೇನೆ, ವಿದ್ಯಾರ್ಥಿ ಫೆಡರೇಷನ್, ಸೇರಿದಂತೆ ಇತರೆ ಸಂಘ ಸಂಸ್ಥೆಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಸಾರ್ವಜನಿಕರ ಗಮನಸೆಳೆಯಲು ಬಸವೇಶ್ವರ ವೃತ್ತದಲ್ಲಿ  ಮಾನವ ಸರಪಳಿ ನಿರ್ಮಿಸಲಾಗಿತ್ತು.

ಬಹಿಷ್ಕಾರ: ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಲು  ಇದೇ ಪ್ರಥಮಬಾರಿಗೆ ತರಗತಿ ಬಹಿಷ್ಕರಿಸಿ ಬೀದಿಗಿಳಿದ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ದೇಶದಾದ್ಯಂತ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಚಳುವಳಿಗೆ ಕೈಜೋಡಿಸಿದ್ದು ವಿಶೇಷವಾಗಿತ್ತು. 

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ದೇವೇಂದ್ರಪ್ಪ ಬಳೂಟಗಿ, ಅಮರೇಶ್ವರ ಶೆಟ್ಟರ್, ಹನುಮಂತಪ ಚೌಡಕಿ, ಅಮರೇಗೌಡ ಪಾಟೀಲ, ಆರ್.ಕೆ.ದೇಸಾಯಿ, ಕೆ.ಮಹೇಶ್ ಮತ್ತಿತರರು ಮಾತನಾಡಿದರು.

ವೀರೇಶ ಬಂಗಾರಶೆಟ್ಟರ, ಬಸವರಾಜ ಹಳ್ಳೂರು, ಶಂಕರ ಕರಪಡಿ, ಟಿ,ಕೃಷ್ಣಮೂರ್ತಿ, ಅಜ್ಜಪ್ಪ ಕರಡಕಲ್, ಮೆಹಬೂಬ್‌ಪಾಷಾ ಕುಷ್ಟಗಿ ಮತ್ತಿತರರು ಪಾಲ್ಗೊಂಡಿದ್ದರು. ಸಿಪಿಐ ನೀಲಪ್ಪ ಓಲೇಕಾರ, ಸಬ್‌ಇನ್ಸ್‌ಪೆಕ್ಟರ್ ನಾರಾಯಣ ದಂಡಿನ, ನಾಗರಾಜ ಕಮ್ಮಾರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿ                     ಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT