ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಜನತೆ ಸಾಕ್ಷರತೆ ಮಹತ್ವ ಅರಿಯಲಿ

Last Updated 26 ಸೆಪ್ಟೆಂಬರ್ 2011, 11:05 IST
ಅಕ್ಷರ ಗಾತ್ರ

ವಿಜಾಪುರ: ದೇಶಕ್ಕೆ ಸ್ವಾತಂತ್ರ್ಯ ದೊರೆತು 6 ದಶಕ ಕಳೆದರೂ ಇನ್ನೂ ಸಂಪೂರ್ಣ ಸಾಕ್ಷರತೆ ಸಾಧಿಸಲು ಸಾಧ್ಯವಾಗದಿರುವುದು ಬೇಸರದ ಸಂಗತಿಯಾಗಿದೆ ಆದ್ದರಿಂದ ಅನಕ್ಷರಸ್ಥರೆಲ್ಲರೂ ಸಾಕ್ಷರರಾ ಗಬೇಕಾದ ಅವಶ್ಯಕತೆ ಇದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ರಾಚು ವಾಲೀಕಾರ ಹೇಳಿದರು.

ಆಹೇರಿಯಲ್ಲಿ ಇತ್ತೀಚೆಗೆ ಜಿಲ್ಲಾ ವಯ ಸ್ಕರ ಶಿಕ್ಷಣ ಇಲಾಖೆ ಹಾಗೂ  ವಾರ್ತಾ ಇಲಾಖೆಯ ಆಶ್ರಯದಲ್ಲಿ ಅಂತರ ರಾಷ್ಟ್ರೀಯ ಸಾಕ್ಷರತಾ ಸಪ್ತಾಹದ ಅಂಗ ವಾಗಿ ಹಮ್ಮಿಕೊಳ್ಳಲಾಗಿದ್ದ `ಗ್ರಾಮೀಣ ಜನತೆಗೆ ಸಾಕ್ಷರತೆಯ ಮಹತ್ವ~ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಸರ್ವಾಂಗೀಣ ಅಭಿವೃದ್ಧಿ ಆ ದೇಶದ ಜನತೆ ಹೊಂದಿರುವ ಸಾಕ್ಷರ ತೆಯ ಪ್ರಮಾಣವನ್ನು ಅವಲಂಬಿಸಿದೆ.  ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ಸಾಕ್ಷ ರತೆ ಮುಖ್ಯ ಪಾತ್ರ ವಹಿಸುತ್ತದೆ ಎಂದರು.

 ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜೆ.ಎಸ್.ಪೂಜಾರಿ ಮಾತನಾಡಿ, ಭಾರತ ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು, ಮಕ್ಕಳಿಗೆ ಇಂದು ಗುಣಮಟ್ಟದ ಶಿಕ್ಷಣ ನೀಡುವುದು ತುರ್ತು ಅಗತ್ಯವಾಗಿದೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು.  ಆಹೇರಿ ಗ್ರಾಮವನ್ನು ಸಂಪೂರ್ಣ ಸಾಕ್ಷರ ಗ್ರಾಮ ವನ್ನಾಗಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಆರ್.ಜಿ.ಮೇಡೆ ದಾರ ಮಾತನಾಡಿದರು.
ಆಹೇರಿ ಬಂಥನಾಳ ವಿರಕ್ತ ಮಠದ ಚಿಲ್ಲಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿ ಸಿದ್ದರು. ಗ್ರಾಮ ಪಂಚಾಯಿತಿ  ಅಧ್ಯಕ್ಷೆ ನೀಲಮ್ಮ ಬಿ. ಮೆಟಗಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹುಸೇನಸಾಬ ಜಾತಗಾರ, ಸದಸ್ಯರಾದ ರುದ್ರಗೌಡ ಪಾಟೀಲ, ನಿಜಲಿಂಗಪ್ಪ ತೋಟದ, ಶರ ಣಪ್ಪ ದಿಂಡವಾರ, ಪರಮಣ್ಣ ತಳವಾರ, ಸಿದ್ದಲಿಂಗಪ್ಪ ವಾಲೀಕಾರ, ಪದ್ಮವ್ವ ಬಿಸ ನಾಳ,  ಶಿವಾನಂದಗೌಡ ಬಿರಾದಾರ, ಬಿ.ಎಂ.ರಾಠೋಡ ಮತ್ತಿತರರು ಉಪ ಸ್ಥಿತರಿದ್ದರು. ಬಸಮ್ಮ ಶಿರಕನಳ್ಳಿ ಪ್ರಾರ್ಥ ನಾ ಗೀತೆ ಹಾಡಿದರು. ಮಹೇಶ ಚಟ್ಟರಕಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT