ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ

Last Updated 7 ಸೆಪ್ಟೆಂಬರ್ 2011, 10:20 IST
ಅಕ್ಷರ ಗಾತ್ರ

ತಾಳಿಕೋಟೆ: ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಆದರೆ ಅವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯದಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.

ಅವರು ಸಮೀಪದ ವನಹಳ್ಳಿಯಲ್ಲಿ ಮಂಗಳವಾರ ನಡೆದ ಮುದ್ದೇಬಿಹಾಳ ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಅಗತ್ಯ ತರಬೇತಿ, ಮೂಲ ಸೌಕರ್ಯಗಳಾದ ಕ್ರೀಡಾ ಮೈದಾನ, ಸೂಕ್ತ ತರಬೇತುದಾರರು ದೊರೆತರೆ ಗ್ರಾಮೀಣ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಬಹುದು. ಆದರೆ ಅವುಗಳ ಕೊರತೆಯೇ ಕ್ರೀಡೆಗಳ ದುಃಸ್ಥಿತಿಗೆ ಕಾರಣವಾಗಿದೆ. ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರ ಎನ್ನುವ ಕಲ್ಪನೆ ಬಿಟ್ಟು ದೇಹಕ್ಕೆ ಸಮತೋಲನ ಆರೋಗ್ಯ ನೀಡುವ ಆಟಗಳು ಬೆಳೆದು ಬರಲಿ ಎಂದು ಹಾರೈಸಿದರು.

ಕ್ರೀಡಾಂಗಣ ನಿರ್ಮಾಣಕ್ಕೆ ಉದ್ಯೋಗಖಾತ್ರಿಯೋಜನೆಯ ಸದುಪಯೋಗ ಪಡೆವಂತೆ ಸಲಹೆ ನೀಡಿದರು.
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಶಿವಾನಂದ ಜಿ.ಎನ್ ಮಾತನಾಡಿ, ದೈಹಿಕ, ಮಾನಸಿಕ ಸಮತೋಲನದ ಅಭಿವೃದ್ಧಿಗೆ ಕ್ರೀಡೆಗಳು ಸಹಕಾರಿ ಎಂದರು.

ಕ್ರೀಡಾಜ್ಯೋತಿಯನ್ನು ಗ್ರಾ.ಪಂ.ಅಧ್ಯಕ್ಷ ಭೀಮಾಶಂಕರ ಹುನಗುಂದ ಬೆಳಗಿಸಿದರು. ಜೆಡಿಎಸ್ ಜಿಲ್ಲಾ ಯುವ ಅಧ್ಯಕ್ಷ ಪ್ರಭು ದೇಸಾಯಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ. ಕ.ರಾ.ಸ.ನೌ.ಸಂಘದ ಅಧ್ಯಕ್ಷ ಎಸ್.ಆರ್.ಕಟ್ಟೀಮನಿ, ಮೊದಲಾದವರು ಮಾತನಾಡಿದರು. 

 ಕಾರ್ಯಕ್ರಮದಲ್ಲಿ ಕ.ರಾ.ಪ್ರಾಶಾ.ಶಿ.ಸಂಘದ  ಜಿಲ್ಲಾ ಖಜಾಂಚಿ ಜಗದೀಶ ಬೋಳಸೂರ, ದೈಹಿಕ ಶಿಕ್ಷಕರ ಸಂಘದ ತಾಲ್ಲೂಕ ಆಧ್ಯಕ್ಷ ಎಂ.ಪಿ.ಶೆಟ್ಟರ, ಬಿ.ಸಿ.ಚಲವಾದಿ, ಗ್ರಾ.ಪಂ.ಸದಸ್ಯ ಗೌಡಪ್ಪಗೌಡ ಬಿರಾದಾರ, ಜಯರಾಜ ಗಾಡಿ, ಎಸ್‌ಡಿಎಂಸಿ ಅಧ್ಯಕ್ಷ ಅಂಬ್ರೇಶರೆಡ್ಡಿ ತಿಳಗೂಳ, ಮಲ್ಲನಗೌಡ ಬಿರಾದಾರ, ಸಾವಿತ್ರಿ ದೊಡಮನಿ, ರಾಮನಗೌಡ ತಿಳಗೂಳ,  ಸಿಆರ್‌ಪಿ ಬಿ.ಡಿ.ಕಪನೂರ, ಟಿ.ಎಸ್.ಲಮಾಣಿ, ರಾಜು ವಿಜಾಪುರ, ಎಸ್.ಎಸ್.ಯಾಳವಾರ, ಕೆ.ಡಿ.ಬಿರಾದಾರ, ಮಹಮ್ಮದ ರಫೀ ಅವಟಿ, ಬೀರಗೊಂಡ ಮೊದಲಾದವರಿದ್ದರು.
ಸಂಜೆ ನಡೆದ ಸಮಾರೋಪದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT