ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮಹಿಳೆ ಸ್ಥಿತಿ ಶೋಚನಿಯ

Last Updated 16 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸಮಾಜ ಬದಲಾವಣೆಯಾದರೂ, ಮಹಿಳೆಯರ ವಿಷಯದಲ್ಲಿರುವ ಭಾವನೆ ಸಂಪೂರ್ಣವಾಗಿ ಬದಲಾವಣೆಯಾಗಿಲ್ಲ~ ಎಂದು ಇಂಡೋ-ಅಮೆರಿಕನ್ ಚೆಂಬರ್ ಆಫ್ ಕಾಮರ್ಸ್ ಮಹಿಳಾ ವಾಣಿಜ್ಯೋದ್ಯಮ ಕೌನ್ಸಿಲ್‌ನ ಅಧ್ಯಕ್ಷೆ ಪ್ರಿಯಾ ಚೆಟ್ಟಿ ರಾಜಗೋಪಾಲ್ ಹೇಳಿದರು.

ಇಂಡೋ-ಅಮೆರಿಕನ್ ಚೆಂಬರ್ ಆಫ್ ಕಾಮರ್ಸ್ ಸಂಸ್ಥೆಯು ಬುಧವಾರ ಏರ್ಪಡಿಸಿದ್ದ ಮಹಿಳಾ ವಾಣಿಜ್ಯೋದ್ಯಮಿಗಳ ಮುಂದಿನ ಭವಿಷ್ಯ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಪಟ್ಟಣದ ಮಹಿಳೆಯರು ಸ್ವಲ್ಪ ಬದಲಾವಣೆ ಹೊಂದಿದ್ದಾರೆ. ಆದರೆ, ಹಳ್ಳಿಗಾಡಿನ ಮಹಿಳೆಯರ ಸ್ಥಿತಿ ಇನ್ನು ಶೋಚನೀಯವಾಗಿದೆ. ಮಹಿಳೆಗೆ ಇನ್ನೂ ವೈಯಕ್ತಿಕ ಸ್ವಾತಂತ್ರ್ಯವಾಗಲೀ ಅಥವಾ ಅವಳ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳುವಂತಹ ಕಾರ್ಯವು ಇನ್ನು ನಡೆದಿಲ್ಲ~ ಎಂದರು.

`ಮಹಿಳೆಯರು ತಮ್ಮ ಸ್ವಂತ ಉದ್ಯಮವನ್ನು ಸ್ಥಾಪಿಸುವುದರಿಂದ ತಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗನ್ನು ತಂದುಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಪ್ರವೃತ್ತಿ ಮಹಿಳೆಯರಲ್ಲಿ ಬೆಳಯಬೇಕು~ ಎಂದು ಹೇಳಿದರು.

ಲಕ್ಷ್ ಜಾಬ್ ಸ್ಕಿಲ್ಸ್ ಅಕಾಡೆಮಿಯ  ಅಧ್ಯಕ್ಷೆ ರೇವತಿ ಕಸ್ತೂರಿ ಮಾತನಾಡಿ, `ಸಮಾಜದಲ್ಲಿ ಮಹಿಳೆಯರ ಬಗೆಗೆ ಇರುವ ಭಾವನೆ ಬದಲಾಗಬೇಕು. ಮಹಿಳೆ ತನ್ನ ಜೀವನದ ನಿರ್ಧಾರವನ್ನು ತಾನೇ ತೆಗೆದುಕೊಳ್ಳುವುದಕ್ಕೆ ಸಶಕ್ತರಾಗಬೇಕು. ತಮ್ಮ ಬಗ್ಗೆ ತಾವು ಆತ್ಮವಿಶ್ವಾಸವನ್ನು ಹೊಂದಿ ಯಾವುದೇ ಕಾರ್ಯವನ್ನು ಕೈಗೊಂಡರೂ ಅದನ್ನು ಸಾಧಿಸುವ ಛಲವನ್ನು ಹೊಂದಬೇಕು~ ಎಂದರು.

`ಉದ್ದಿಮೆಗಳನ್ನು ಸ್ಥಾಪಿಸಿ ನಿರ್ವಹಿಸುವುದು ಸುಲಭವಲ್ಲ. ಆದರೆ, ಈಗಿನ ಸಂದರ್ಭದಲ್ಲಿ ಮಹಿಳೆ ತನ್ನ ಗಟ್ಟಿತನವನ್ನು ಪ್ರದರ್ಶಿಸಬೇಕು. ಆಗಲೇ ಸಮಾಜದಲ್ಲಿ ಅವಳು ಉತ್ತಮವಾದ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.

ಡೆಲ್‌ಡೆಲ್ ಇಂಡಿಯಾ ನಿರ್ದೇಶಕ ವಿಕಾಸ್ ಬೋಸ್ಲೆ, ಪರಿಕ್ರಮ ಮನುಕುಲ ಪ್ರತಿಷ್ಠಾನದ ಅಧ್ಯಕ್ಷೆ ಶುಕ್ಲಾ ಬೋಸ್ ಸೇರಿದಂತೆ ಅನೇಕ ಮಹಿಳಾ ವಾಣಿಜ್ಯೋದ್ಯಮಿಗಳು ಸಂಕಿರಣದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT