ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣಾಭಿವೃದ್ಧಿಗೆ ಸ್ಪಂದನೆ ಅಗತ್ಯ: ನಾಡಗೌಡ

Last Updated 16 ಅಕ್ಟೋಬರ್ 2012, 9:00 IST
ಅಕ್ಷರ ಗಾತ್ರ

ಹುನಗುಂದ: ಯುವಕರು ತಮ್ಮ ದೈನಂದಿನ ಓದಿನೊಂದಿಗೆ ಸಮಾಜದ ವಿಧಾಯಕ ಕಾರ್ಯಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಗ್ರಾಮೀಣ ಅಭಿವೃದ್ಧಿಯಲ್ಲಿ ಕನಿಷ್ಠ ಸಹಕಾರವನ್ನು ಕೊಡಬೇಕು. ಆ ಮೂಲಕ ಅವರು ನಾಯಕತ್ವ ಮತ್ತು ಸೇವಾ ಗುಣವನ್ನು ರೂಢಿಸಿಕೊಳ್ಳಬೇಕು ಎಂದು ನಾಗೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲಗೌಡ ನಾಡಗೌಡ ಹೇಳಿದರು.

ಅವರು ಸಮೀಪದ ಚಿತ್ತವಾಡಗಿಯಲ್ಲಿ ನಡೆದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ಶಿಬಿರ ಬುಧವಾರ ಉದ್ಘಾಟಿಸಿ ಮಾತನಾಡಿದರು. ಪ್ರಭಾರ ಪ್ರಾಚಾರ್ಯ ಮಹಾಂತೇಶ ಅರಹುಣಸಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎ.ಜಿ. ಗೌಡರ, ಎಸ್‌ಡಿಎಂಸಿ ಸದಸ್ಯ ಗುರಪ್ಪ ಹಕಾರಿ, ಗ್ರಾಮದ ಹಿರಿಯರಾದ ವಿಜಯಕುಮಾರ ಪಾಟೀಲ, ಗದ್ದೆನಗೌಡ ಗೌಡರ, ಈರಪ್ಪ ಇದ್ದಲಗಿ, ಬೈಲಪ್ಪ ಮಾದರ, ಶಿವನಗೌಡ ಗೌಡರ, ಸಂಗಪ್ಪ ಆಂದೇಲಿ, ಬಾಳಪ್ಪ ಆಂದೇಲಿ, ರಾಮನಗೌಡ ಖಾನಾಪುರ, ಸಂಗನಗೌಡ ಭಾವಿಕಟ್ಟಿ, ಮಲ್ಲಪ್ಪ ಪೂಜಾರ, ದುಶ್ಯಂತ ದೇಸಾಯಿ ಮತ್ತು ಶಿಕ್ಷಕ ಪಿ.ಎಚ್.ಪವಾರ ಉಪಸ್ಥಿತರಿದ್ದರು.

ಶಿಬಿರ ಸಂಯೋಜನಾಧಿಕಾರಿ ಶರಣಪ್ಪ ಹೂಲಗೇರಿ ಸ್ವಾಗತಿಸಿದರು. ಎ.ಎಚ್.ಮೋಮಿನ್ ನಿರೂಪಿಸಿದರು. ನಾಗರಾಜ ನಾಡಗೌಡ ವಂದಿಸಿದರು.

ಅದ್ದೂರಿ ನವರಾತ್ರಿ ಆಚರಣೆ
ಮಹಾಲಿಂಗಪುರ: ನಗರದ ದೇವಾಂಗ ಸಮಾಜದ ವತಿಯಿಂದ ನವರಾತ್ರಿ ಅಂಗವಾಗಿ ದುರ್ಗಾಪೂಜೆಯನ್ನು ಇದೇ 16ರಿಂದ 23ರ ವರೆಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಪುರಾಣ ಪ್ರವಚನ, ಮಹಿಳಾ ಸಂಘದ ಉದ್ಘಾಟನೆ, ಊರಲ್ಲಿ ನಡೆಸಬೇಕಾದ ಶಿಸ್ತಿನ ಮೆರವಣಿಗೆ ಕುರಿತ ಚರ್ಚೆ ಮಾಡಲಾಯಿತು. ಉಸ್ತುವಾರಿಯನ್ನು ಸಮಾಜದ ಯುವಕ ಸಂಘಟನೆಯ ಅಧ್ಯಕ್ಷ ಸತೀಶ ಸೋರಗಾಂವಿ ಅವರಿಗೆ ವಹಿಸಲಾಯಿತು.

ನಂತರ ಮಾತನಾಡಿದ ಡಾ.ಉಮೇಶ ವನಹಳ್ಳಿ, ನವರಾತ್ರಿ ಕಾರ್ಯಕ್ರಮಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಎಲ್ಲ ರೀತಿಯ ವ್ಯವಸ್ಥೆಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಸಭೆಯಲ್ಲಿ ಮಲ್ಲಪ್ಪಣ್ಣ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಶ್ರಿಶೈಲ ಕಿರಗಟಗಿ, ಸಂಜು ಅಂಬಿ, ಬಿಜಾಪುರ, ಬಾಡಗಿ, ಶಿವಾನಂದ ಕಿತ್ತೂರ ಪಾಲ್ಗೊಂಡಿದ್ದರು. ಬಿ.ಸಿ.ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಡವರಿಗೆ ಅನ್ಯಾಯ: ಆರೋಪ

ಕೆರೂರ: ಪಟ್ಟಣದಲ್ಲಿ ವಾಜಪೇಯಿ ನಗರ ವಸತಿ ಯೋಜನೆಯ ನಿವೇಶನಗಳ ಹಂಚಿಕೆ ಅಸಮರ್ಪಕವಾಗಿದ್ದು, ಪಟ್ಟಿಯನ್ನು ಮರುಪರಿಶೀಲಿಸಿ ಅರ್ಹರಿಗೆ ನಿವೇಶನ ವಿತರಿಸಲು ಗಮನ ನೀಡಬೇಕು ಎಂದು ತಾಲ್ಲೂಕಿನ ಜೆಡಿಎಸ್ ಅಲ್ಪಸಂಖ್ಯಾತರ ಘಟಕವು ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

ಜೆಡಿಎಸ್ ಅಲ್ಪಸಂಖ್ಯಾತರ ತಾಲ್ಲೂಕು ಘಟಕದ ಅಧ್ಯಕ್ಷ ಸಲೀಂ ಅತ್ತಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಮಕೃಷ್ಣ ಸಿದ್ದನಕೊಳ್ಳ ಅವರಿಗೆ ಮನವಿ ಅರ್ಪಿಸಿದರು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬಡ ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.

ವಾಜಪೇಯಿ ನಗರ ವಸತಿ ಯೋಜನೆಯಡಿ ಹಂಚಿಕೆಯಲ್ಲಿ ತಾರತಮ್ಯ ಆಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ಈಗಿನ ನಿವೇಶನಗಳು ಶ್ರೀಮಂತರ ಹಾಗೂ ಒಂದೇ ಕುಟುಂಬದ 2-3 ಜನರಿಗೆ ಮಂಜೂರಾಗಿವೆ. ವಾಜಪೇಯಿ ವಸತಿ ಯೋಜನೆ ಸಮಿತಿ ಬಡವರಿಗೆ ಹಾಗೂ ಎಲ್ಲ ವರ್ಗದ ಜನತೆಗೆ ವಿತರಣೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಪ.ಪಂ. ಸದಸ್ಯ ಲಾಕೋಪತಿ ಹೊಸಪೇಟೆ, ಸಂತೋಷ ಕ್ಷತ್ರಿ, ಪಾಂಡು ಪೂಜಾರ, ಸದಸ್ಯೆ ಹುಸೇನವ್ವ ತುಳಸಿಗೇರಿ, ವಿಠ್ಠಲಗೌಡ ಗೌಡ್ರ, ಮಯೂರ ಟೇಲರ್, ಡಿ.ಡಿ. ಬಂಡಿವಡ್ಡರ, ಸಯ್ಯದ್ ಗೋಲಂದಾಜ, ಕಂಠೇಶ ಕತ್ತಿ, ಮಲ್ಲೇಶಿ ಮಲ್ಲಾಡದ, ಬಿ.ಎನ್. ದೊಡಕಟ್ಟಿ, ಬುಡ್ಡೆಸಾಬ ಮುಲ್ಲಾ, ಹಾಸೀಮಸಾಬ ಮುಲ್ಲಾ, ಮಹ್ಮದ್ ಹಸನ್ ಕಲ್ಯಾಣಿ, ಸತೀಶ ಕೆಂಚನಗುಡ್ಡ, ಗುಂಡೂರಾವ್ ಗೌಡರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT