ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕ ಸಂತೃಪ್ತಿ ಮುಖ್ಯ: ಟಾಟಾ ಮೋಟಾರ್ಸ್

Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  ಮಾರಾಟ ಹೆಚ್ಚಳಕ್ಕಾಗಿ ಹಾಗೂ ಗ್ರಾಹಕರಲ್ಲಿ ಸಂತೃಪ್ತಿ  ಮೂಡಿ ಸುವ ಉದ್ದೇಶದಿಂದ ದೇಶದ ವಿವಿಧೆ ಡೆಯ 150 ಷೋರೂಂಗಳನ್ನು ವೈ–ಫೈ ಸಹಿತ ಅತ್ಯಾಧುನಿಕ ತಂತ್ರಜ್ಞಾನ ಒಳ ಗೊಂಡಂತೆ ಉನ್ನತೀಕರಿಸಲಾಗುವುದು ಎಂದು ಟಾಟಾ ಮೋಟಾರ್ಸ್‌ ಪ್ರಯಾ ಣಿಕ ವಾಹನಗಳ ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ಅಂಕುಶ್‌ ಅರೋರಾ ಹೇಳಿದರು.

ನಗರದಲ್ಲಿ ನೂತನ ಷೋರೂಂ ‘ಕಾಂಕರ್ಡ್‌’ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಒಟ್ಟು 41 ಷೋರೂಂಗಳಿದ್ದು, 14 ಮಾರಾಟ ಕೇಂದ್ರಗಳನ್ನು ಉನ್ನತ ದರ್ಜೆಗೇರಿಸಲಾ ಗುವುದು. ಇದಕ್ಕಾಗಿಯೇ ‘ಹೊರೈಜನ್‌ ನೆಕ್ಟ್ಸ್’ ಕಾರ್ಯತಂತ್ರ ರೂಪಿಸಲಾಗಿದೆ. ಆ ಮೂಲಕ ಮುಂದಿನ ತ್ರೈಮಾಸಿಕ ಗಳಲ್ಲಿ ಕಾರುಗಳ ಮಾರಾಟದಲ್ಲಿ ಉತ್ತಮ ಸಾಧನೆ ತೋರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಾಟಾ ವಾಹನಗಳ ಮಾರಾಟದಲ್ಲಿ ದಕ್ಷಿಣದ 4 ರಾಜ್ಯಗಳಲ್ಲಿ ಕರ್ನಾಟಕ ದಿಂದಲೇ ಶೇ 32ರಷ್ಟು ಕೊಡುಗೆ ಬರುತ್ತಿದೆ.  ಇಂಡಿಕಾ, ಇಂಡಿಗೊ, ವಿಸ್ಟಾ ಮತ್ತು ನ್ಯಾನೊ ಕರ್ನಾಟಕದಲ್ಲಿ ಹೆಚ್ಚು ಮಾರಾಟವಾಗುತ್ತಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT