ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ವೇದಿಕೆಯಲ್ಲಿ ಹೆಚ್ಚು ಪ್ರಕರಣ ದಾಖಲು

ಬ್ಯಾಂಕ್‌ಗಳಲ್ಲಿ ಭಾಷೆ ಸಮಸ್ಯೆ:
Last Updated 19 ಸೆಪ್ಟೆಂಬರ್ 2013, 10:06 IST
ಅಕ್ಷರ ಗಾತ್ರ

ಉಡುಪಿ: ‘ಯಾವುದೇ ಸಂವಹನದಲ್ಲಿ ಭಾಷೆ ಪ್ರಾಮುಖ್ಯತೆ ಪಡೆದಿದ್ದು, ಭಾಷಾ ಸಮಸ್ಯೆಗಳಿಂದಾಗಿಯೇ ಬ್ಯಾಂಕ್‌ಗೆ ಸಂಬಂದಿಸಿದ ಪ್ರಕರಣಗಳು ಗ್ರಾಹಕರ ವೇದಿಕೆಯಲ್ಲಿ ದಾಖಲಾ ಗುತ್ತದೆ’ ಎಂದು ಉಡುಪಿ ಮಾನವ ಹಕ್ಕುಗಳ ಸಂರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನು ಭಾಗ್ ಹೇಳಿದರು.

ಕಾರ್ಪೊರೇಶನ್ ಬ್ಯಾಂಕ್‌ನ ಉಡುಪಿ ವಲಯ ಕಚೇರಿಯಲ್ಲಿ ಇತ್ತೀಚೆಗೆ ನಡೆದ  ಹಿಂದಿ ಮಾಸಾಚರಣೆಯನ್ನು ಉದ್ಘಾ ಟಿಸಿ ಅವರು ಮಾತನಾಡಿದರು.

‘ಬ್ಯಾಂಕ್‌ನ ಸಿಬ್ಬಂದಿಗಳು ದೈನಂದಿನ ಕಾರ್ಯಗಳಲ್ಲಿ ಹಿಂದಿ ಭಾಷೆಯ ಬಳಕೆ ಮಾಡಬೇಕು’ ಎಂದು ವಲಯ ಕಚೆೇ ರಿಯ ಸಹಾಯಕ ಮಹಾ ಪ್ರಬಂಧಕ ಎನ್.ಮಂಜುನಾಥ್ ಶೆಣೈ ಹೇಳಿದರು.

ಹಿಂದಿ ಮಾಸಾಚರಣೆ ಪ್ರಯುಕ್ತ ಏಪರ್ಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ, ಕಾರ್ಪ್ ಕಾರ್ಯಪಾಲಕ ಪುರಸ್ಕಾರ  ಮತ್ತು  ಕಾರ್ಪ್ ರಾಜಭಾಷಾ ಪುರಸ್ಕಾರ ಯೋಜನೆ ಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಲಯದ ಹಿಂದಿ ಅಧಿಕಾರಿ ಬಿನು ಟಿ.ಎಸ್.ರಾಜಭಾಷಾ ಅನುಷ್ಠಾನದ ವಾರ್ಷಿಕ ಕಾರ್ಯಕ್ರಮಗಳ ವರದಿ ವಾಚಿಸಿದರು.
ಕೆ.ಭಾರತಿ ಮತ್ತು  ಜಯಲಕ್ಷ್ಮಿ ಹೆಗ್ದೆ ಪ್ರಾರ್ಥಿಸಿದರು. ವಲಯ ಕಚೇರಿಯ ಮುಖ್ಯ ಪ್ರಬಂಧಕ ಆರ್‌ ಹಂಸಧ್ವ್ವಜ ಸ್ವಾಗತಿಸಿದರು.

ಇನ್ನೋರ್ವ ಮುಖ್ಯ ಪ್ರಬಂಧಕ ಮುರಾರಿ ರಾವ್ ವಂದಿಸಿದರು. ವಲಯ ಕಚೆೇರಿಯ ಅಧಿಕಾರಿಗಳಾದ  ಅಂಕಿತಾ ತ್ರಿಪಾಠಿ ಮತ್ತು ಎನ್. ಮಂಜುನಾಥ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT