ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಸೇವೆಗೆ ಆದ್ಯತೆ ನೀಡಲು ಸ್ವಾಮೀಜಿ ಸಲಹೆ

Last Updated 11 ಡಿಸೆಂಬರ್ 2013, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ಯಾಂಕ್‌ಗಳು ಗ್ರಾಹಕರ ಸೇವೆಯನ್ನು ಪ್ರಧಾನವಾಗಿಸಿಕೊಂಡು ಕಾರ್ಯನಿರ್ವಹಿಸಬೇಕು’ ಎಂದು ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾ­ನಂ­ದನಾಥ ಸ್ವಾಮೀಜಿ ಹೇಳಿದರು.

ಜನತಾ ಕೋ ಆಪರೇಟಿವ್‌ ಬ್ಯಾಂಕ್‌  ನಗರದಲ್ಲಿ ಈಚೆಗೆ ಆಯೋ­ಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಬ್ಯಾಂಕ್‌­ಗಳು ಗ್ರಾಹಕರ ಸಹಾಯವನ್ನು ಸದಾ ಸ್ಮರಿಸಬೇಕು. ಬ್ಯಾಂಕ್‌ನ ಸಿಬ್ಬಂದಿ ಬ್ಯಾಂಕ್‌ನ ಏಳಿಗೆ ಮತ್ತು ಗ್ರಾಹಕರ ಏಳಿಗೆಗೆ ಶ್ರಮಿಸಬೇಕು’ ಎಂದರು.

ಬ್ಯಾಂಕ್‌ನ ಅಧ್ಯಕ್ಷ ಸಿ.ಎಲ್.ಮರಿಗೌಡ ಮಾತನಾಡಿ, ‘ಈಗಾಗಲೇ ರಾಜ್ಯದ ಸುಮಾರು ೨೨೦ ಕ್ಕೂ ಹೆಚ್ಚು ಕೋ ಆಪರೇಟಿವ್ ಬ್ಯಾಂಕ್‌ಗಳ ಪಟ್ಟಿಯಲ್ಲಿ ಮೊದಲ ೬ ಸ್ಥಾನಗಳಲ್ಲಿ ಒಂದೆನಿಸಿಕೊಂಡಿರುವ ಬ್ಯಾಂಕಿನ ವಹಿವಾಟು ₨ ೫೦೦ ಕೋಟಿಗೂ ಹೆಚ್ಚಿದೆ’ ಎಂದರು.

‘ಸುವರ್ಣ ಸಂಭ್ರಮಾಚರಣೆಗೆ ಸಜ್ಜಾಗುತ್ತಿರುವ ದಿ ಜನತಾ ಕೋ ಆಪರೇಟಿವ್ ಬ್ಯಾಂಕ್ ಇನ್ನೂ ಹಲವಾರು ವಿಶೇಷ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT