ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರು ಅಸಂತುಷ್ಟ- ಸಮೀಕ್ಷೆ ಬಹಿರಂಗ

Last Updated 8 ಅಕ್ಟೋಬರ್ 2012, 8:10 IST
ಅಕ್ಷರ ಗಾತ್ರ

ಮಡಿಕೇರಿ: ವಿರಾಜಪೇಟೆಯ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (ಎಚ್‌ಪಿ) ಅಡುಗೆ ಅನಿಲ ಗ್ರಾಹಕರು ಕಂಪೆನಿಯ ಸೇವೆಯ ಬಗ್ಗೆ ಅಸಂತುಷ್ಟ ಹೊಂದಿದ್ದಾರೆ ಎಂದು ನಾಗರಿಕ ಸಮಿತಿ ಯು ನಡೆಸಿದ ಸಮೀಕ್ಷೆಯಿಂದ ಬಹಿರಂಗವಾಗಿದೆ.

ಎಚ್‌ಪಿ ಕಂಪೆನಿಯು ಬುಕ್ಕಿಂಗ್ ಮಾಡಲು ಆನ್‌ಲೈನ್ ಪದ್ಧತಿಯನ್ನು ಜಾರಿಗೊಳಿಸಿ ವರ್ಷ ಕಳೆದ ಸಂದರ್ಭದಲ್ಲಿ ಈ ಪದ್ಧತಿಯ ಬಗ್ಗೆ ಗ್ರಾಹಕರ ಅನಿಸಿಕೆಯನ್ನು ಸಂಗ್ರಹಿಸಲು ಸಮೀಕ್ಷೆ ನಡೆಸಲಾಯಿತು. ಮುಖ್ಯವಾಗಿ ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸುಮಾರು 2,000 ಗ್ರಾಹಕರಿಗೆ ಪ್ರಶ್ನಾವಳಿ ನೀಡುವ ಮೂಲಕ ಅವರ ಅಭಿಪ್ರಾಯ ಸಂಗ್ರಹಿಸ ಲಾಗಿದೆ ಎಂದು ಸಮಿತಿಯ ಅಧ್ಯಕ್ಷ ವಾಸು ನಂಜಪ್ಪ ತಿಳಿಸಿದರು.

ನಗರದ ಭಾನುವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿ, ಒಟ್ಟು 2,000 ಗ್ರಾಹಕರಿಗೆ ಸಮೀಕ್ಷೆಯ ಪ್ರಶ್ನಾವಳಿ ನೀಡಲಾಗಿತ್ತು. ಅವರಲ್ಲಿ ಸುಮಾರು 527 ಗ್ರಾಹಕರು ತಮ್ಮ ಅನಿಸಿಕೆಗಳನ್ನು ಪ್ರಶ್ನಾವಳಿ ಮೂಲಕ ವ್ಯಕ್ತಪಡಿಸಿದ್ದಾರೆ ಎಂದರು.

ಸಮೀಕ್ಷೆ ಸಾರಾಂಶ ಇಂತಿದೆ; 
* ಆನ್‌ಲೈನ್ (ಎಚ್‌ಪಿ ಕಂಪೆನಿಯ ನಿಗದಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸುವುದು) ಮೂಲಕ ಬುಕ್ಕಿಂಗ್ ಮಾಡಿದಾಗ ಗ್ರಾಹಕರಿಗೆ ಪ್ರತ್ಯುತ್ತರವಾಗಿ `24ರಿಂದ 48 ಗಂಟೆಯೊಳಗೆ ಸಿಲಿಂಡರ್ ತಲುಪಿಸ ಲಾಗುವುದು~ ಎನ್ನುವ ಕಂಪೆನಿಯ ಮೆಸೇಜ್ ಬರಬೇಕು. ಆದರೆ, ಹಲವು ಗ್ರಾಹಕರಿಗೆ ಇಂತಹ ಪ್ರತ್ಯುತ್ತರ ಮೆಸೇಜ್‌ಗಳೇ ಬರುವುದಿಲ್ಲ.

*  ಮೆಸೇಜ್‌ಗಳು ಬಂದ ಗ್ರಾಹಕರಿಗೂ ಸಹ ಕಂಪೆನಿ ಹೇಳಿದ ನಿಗದಿತ ಸಮಯದಲ್ಲಿ ಸಿಲಿಂಡರ್ ತಲುಪಿಲ್ಲ. ಕೇವಲ 35 ಗ್ರಾಹಕರಿಗೆ ಮಾತ್ರ ಮೆಸೇಜ್‌ನಂತೆ ನಿಗದಿತ ಸಮಯ ದಲ್ಲಿ ಸಿಲಿಂಡರ್ ತಲುಪಿದೆ. ಬಾಕಿ 85 ಗ್ರಾಹಕರಿಗೆ 3ರಿಂದ 7 ದಿನಗಳೊಳಗೆ, 59 ಗ್ರಾಹಕರಿಗೆ 7ರಿಂದ 14 ದಿನಗಳೊಳಗೆ, ಇನ್ನುಳಿದವರಿಗೆ ಇನ್ನೂ ತಡವಾಗಿ ದೊರೆತಿದೆ.

* ತಿಂಗಳಿಗೊಂದು ಸಿಲಿಂಡರ್ ಬೇಕಾದರೆ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಬೇಕೆಂದು ಹೇಳಲಾ ಗುತ್ತದೆ. ಆದರೆ, ಹೀಗೆ ಬುಕ್ಕಿಂಗ್ ಮಾಡಿದಾಗಲೂ ವಿಳಂಬವಾಗಿಯೇ ದೊರೆತಿದೆ. 527 ಗ್ರಾಹಕರ ಪೈಕಿ ಕೇವಲ 59  ಗ್ರಾಹಕರಿಗೆ 30ರಿಂದ 35 ದಿನಗಳೊಳಗೆ ಸಿಲಿಂಡರ್ ದೊರೆತಿದೆ. ಇವರಲ್ಲಿ 28 ಗ್ರಾಹಕರಿಗೆ ಮಾತ್ರ ಮನೆಗೆ ಸಿಲಿಂಡರ್ ಪೂರೈಸಲಾಗಿದೆ. ಬಾಕಿ ಜನರು ಗೋಡೌನ್‌ಗೆ ಹೋಗಿಯೇ ಪಡೆದುಕೊಂಡಿದ್ದಾರೆ.

* 35ರಿಂದ 40 ದಿನಗಳೊಳಗೆ ಸಿಲಿಂಡರ್ ಪಡೆದವರು 177 ಗ್ರಾಹಕ ರಾದರೆ ಉಳಿದವರು ಸಿಲಿಂಡರ್ ಪಡೆಯಲು 40ರಿಂದ 3 ತಿಂಗಳವರೆಗೆ ಕಾಯಬೇಕಾಯಿತು.

* ನಿಯಮ ಪ್ರಕಾರ ಮತ್ತು ಏಜೆಂಟರು ಕೊಟ್ಟ ಆಶ್ವಾಸನೆಯ ಪ್ರಕಾರ ಸಿಲಿಂಡರ್‌ನನ್ನು ಗ್ರಾಹಕರ ಮನೆಗಳಿಗೆ ತಲುಪಿಸಬೇಕು ಎಂದಿದೆ. ಆದರೆ, ಹೀಗೆ ಮನೆಯಲ್ಲಿಯೇ ಸಿಲಿಂಡರ್ ಪಡೆದು ಕೊಂಡವರ ಸಂಖ್ಯೆ ಕೇವಲ 251 ಮಾತ್ರ.

* ವಿರಾಜಪೇಟೆ ಪಟ್ಟಣ ವ್ಯಾಪ್ತಿಯ `5 ಕಿ.ಮೀ ವ್ಯಾಪ್ತಿಯು ಉಚಿತ ಪೂರೈಕೆ ವಲಯ~ದಡಿ ಬರುವ ಮನೆಗಳಿಗೆ ಸಿಲಿಂಡರ್‌ನ್ನು ಉಚಿತವಾಗಿ ತಲುಪಿಸಬೇಕು. ಆಗ ಕೇವಲ ಸಿಲಿಂಡರ್  407 ರೂಪಾಯಿ ಮಾತ್ರ ಪಡೆಯ ಬೇಕು. ಇಷ್ಟೇ ಮೊತ್ತದ ಹಣವನ್ನು ತಮ್ಮಿಂದ ಪಡೆದುಕೊಳ್ಳಲಾಗಿದೆ ಎಂದು ಕೇವಲ 8 ಗ್ರಾಹಕರು ಮಾತ್ರ ಹೇಳಿದ್ದಾರೆ.
ಹಲವು ಗ್ರಾಹಕರು ರೂ 420ರಿಂದ ರೂ 475 ವರೆಗೆ ಹಣ ಪಡೆಯಲಾಗಿದೆ ಎಂದು ಹೇಳಿದ್ದಾರೆ.

`ಎಚ್‌ಪಿ ಕಂಪೆನಿಗೆ ವರದಿ~
ನಾಗರಿಕ ಸಮಿತಿ ವತಿಯಿಂದ ನಡೆಸಲಾಗಿರುವ ಈ ಸಮೀಕ್ಷೆಯ ವರದಿಯ ಪ್ರತಿಯನ್ನು ಸರ್ಕಾರಕ್ಕೆ ಹಾಗೂ ಎಚ್‌ಪಿ ಕಂಪೆನಿಯ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುವುದು. ಗ್ರಾಹಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಸಮಿತಿಯ ಸಂಚಾಲಕ ಡಾ.ಐ.ಆರ್. ದುರ್ಗಾಪ್ರಸಾದ್ ಹೇಳಿದರು.

ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿದರೆ 24ರಿಂದ 48 ಗಂಟೆಯೊಳಗೆ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ಕಂಪೆನಿ ನಡೆಸುತ್ತಿರುವ ಪ್ರಚಾರವು ಬೋಗಸ್ ಪ್ರಚಾರವಾಗಿದೆ ಎಂದು ಅವರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯ ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT