ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀಕ್‌ನಲ್ಲಿ ಸಮ್ಮಿಶ್ರ ಸರ್ಕಾರ

Last Updated 18 ಜೂನ್ 2012, 19:30 IST
ಅಕ್ಷರ ಗಾತ್ರ

ಅಥೆನ್ಸ್ (ಐಎಎನ್‌ಎಸ್): ಯುರೊ ಕರೆನ್ಸಿ ಪರ ಇರುವ ನ್ಯೂ ಡೆಮಾಕ್ರಸಿ ಪಕ್ಷವು ಗ್ರೀಕ್ ಚುನಾವಣೆಯಲ್ಲಿ ಗೆದ್ದಿರುವುದರಿಂದ ಯುರೊ ಕರೆನ್ಸಿ ವಲಯದ ರಾಷ್ಟ್ರಗಳಿಗೆ ಸಮಾಧಾನ ಮೂಡಿದೆ.

ಜಿ-20 ರಾಷ್ಟ್ರಗಳ ಮುಖಂಡರು ಶೃಂಗ ಸಭೆಗಾಗಿ ಮೆಕ್ಸಿಕೊ ತಲುಪುತ್ತಿರುವ ಸಂದರ್ಭದಲ್ಲಿ ಗ್ರೀಕ್ ಚುನಾವಣಾ ಫಲಿತಾಂಶವು ಯುರೊ ರಾಷ್ಟ್ರಗಳ ಮುಖಂಡರಲ್ಲಿ ನೆಮ್ಮದಿಯ ಭಾವನೆಯನ್ನು ಮೂಡಿಸಿದೆ.

 ಗ್ರೀಕ್ ಸಂಸತ್ತಿನಲ್ಲಿ  300 ಸ್ಥಾನಗಳ ಪೈಕಿ ನ್ಯೂ ಡೆಮಾಕ್ರಸಿ ಪಕ್ಷವು 129 ಸ್ಥಾನಗಳನ್ನು ಗೆದ್ದಿದ್ದು, ಸಿರಿಜಾ ಪಕ್ಷವು 71 ಸ್ಥಾನಗಳನ್ನು ಮತ್ತು ಪಸಾಕ್ ಸೋಷಿಯಲಿಸ್ಟ್ ಪಕ್ಷವು 33 ಸ್ಥಾನಗಳನ್ನು ಗೆದ್ದಿದೆ. ನ್ಯೂ ಡೆಮಾಕ್ರಸಿ ಪಕ್ಷ ಮತ್ತು  ಪಸಾಕ್ ಸೋಷಿಯಲಿಸ್ಟ್ ಪಕ್ಷ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾಗಿವೆ.

ಇತರ ಯುರೋಪ್ ರಾಷ್ಟ್ರಗಳಂತೆ ಗ್ರೀಕ್ ಅರ್ಥ ವ್ಯವಸ್ಥೆಯು ಸಂಪೂರ್ಣ ಕುಸಿದು ಬಿದ್ದಿರುವುದರಿಂದ ಹಳೆಯ ಕರೆನ್ಸಿ ವ್ಯವಸ್ಥೆಗೆ ಮರಳುವ ಸಿರಿಜಾ ಪಕ್ಷಕ್ಕೆ ಬೆಂಬಲ ದೊರೆತಿದ್ದರೆ ಇಡೀ ಯುರೊ ಕರೆನ್ಸಿ ವಲಯದ ಮೇಲೆ ಭಾರಿ ದುಷ್ಪರಿಣಾಮ ಉಂಟಾಗುತ್ತಿತ್ತು.

ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿಯ ನ್ಯೂ ಡೆಮಾಕ್ರಸಿ ಪಕ್ಷದ ಉದ್ದೇಶ ಈಡೇರಿಕೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಯುರೊ ಕರೆನ್ಸಿ ವಲಯದ ರಾಷ್ಟ್ರಗಳು ಮುಂದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT