ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತ್ಯಾಜ್ಯ ವಿಲೇವಾರಿ: ನಿಯೋಗ ತೆರಳಲು ನಿರ್ಣಯ

Last Updated 2 ಜನವರಿ 2012, 9:00 IST
ಅಕ್ಷರ ಗಾತ್ರ

ದಾಂಡೇಲಿ: ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸೂಕ್ತ ಜಾಗೆ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಲು ಶೀಘ್ರದಲ್ಲೇ ಬೆಂಗಳೂರಿಗೆ ಸರ್ವ ಪಕ್ಷಗಳ ನಿಯೋಗ ಕೊಂಡೊ ಯ್ಯಲು ಶನಿವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತ ದಿಂದ ನಿರ್ಧರಿಸಲಾಯಿತು.

`ನಗರದ ನಿತ್ಯದ ತ್ಯಾಜ್ಯವನ್ನು ವ್ಯವ ಸ್ಥಿತವಾಗಿ ಸಂಸ್ಕರಣೆ ಮಾಡಲು ಸೂಕ್ತ ಸ್ಥಳಕ್ಕಾಗಿ ಕಳೆದ 12 ವರ್ಷಗಳಿಂದ  ಹುಡುಕಾಟ ನಡೆದಿದೆ. ಈ ಹಿಂದೆ ನಿರ್ಧ ರಿಸಲಾದ ಎರಡು ಸ್ಥಳಗಳಿಗೆ ಸಂಬಂಧಿಸಿ ವಿರೋಧ ವ್ಯಕ್ತವಾದ್ದರಿಂದ ಈ ವಿಷಯ ನಗರಾಡಳಿತಕ್ಕೆ ತಲೆನೋವಾಗಿ ಪರಿಣ ಮಿಸಿದೆ. ಸಮಸ್ಯೆಗೆ ಪರಿಹಾರ ಕಾಣ ದಿದ್ದರೆ ಇನ್ನಷ್ಟು ಸಮಸ್ಯೆ ಎದುರಿಸ ಬೇಕಾಗುತ್ತದೆ~ ಎಂದು ಅಧ್ಯಕ್ಷ ಗೋವಿಂದ ಮೇಲಗಿರಿ ಹೇಳಿದರು.

ಹಿರಿಯ ಸದಸ್ಯರಾದ ಆದಂ ದೇಸೂರ, ಬಲವಂತ ಬೊಮ್ಮನಳ್ಳಿ, ಶಾರದಾ ಪರಶುರಾಮ ಹಾಗೂ ರವಿ ಸುತಾರ ಮಾತನಾಡಿ, ನಗರದ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾ ಡಲು ಅಡ್ಡಿಯಾದ ಸಮಸ್ಯಗೆ ಪಕ್ಷ ಭೇದ ವಿಲ್ಲದೆ ಒಮ್ಮತದಿಂದ ಪ್ರಯತ್ನಿಸಬೇಕು ಎಂದರು.

ಹಿರಿಯ ಸದಸ್ಯ ರಾಮಲಿಂಗ ಜಾಧವ, ಹಳೆದಾಂಡೇಲಿಯ ಕೆಲವು ಪ್ರದೇಶಗಳಲ್ಲಿ ಕಸ ಸಂಗ್ರಹಿಸಲು ಹೋದ ಸಿಬ್ಬಂದಿಗೆ ಕಸವನ್ನು ನೀಡದ ಕೆಲವು ಜನರು ತ್ಯಾಜ್ಯವನ್ನು ಕಂಡಲ್ಲೆಲ್ಲ ಚೆಲ್ಲು ತ್ತಿದ್ದು ಅದನ್ನು ಸ್ವಚ್ಛಗೊಳಿಸುವುದು ಸವಾಲಾಗಿ ಪರಿಣಮಿಸಿದೆ. ಈ ಕುರಿತು ನಗರಾಡಳಿತ ಗಮನಹರಿಸಬೇಕು ಎಂದರು.

ಇದಕ್ಕೆ ಉತ್ತರಿಸಿದ ನಗರಸಭಾ ಅಧ್ಯಕ್ಷರು, ಸಿಬ್ಬಂದಿ ಕೊರತೆ ಇದೆ. ಆದರೆ ಕಸ ಸಂಗ್ರಹಕ್ಕೆ ಸಂಬಂಧಿಸಿ ನಗರಸಭೆ ಸಾಕಷ್ಟು ಪ್ರಚಾರ ನಡೆಸಿದೆ.  ನಾಗರಿಕರು ಇದಕ್ಕೆ ಸ್ಪಂದಿಸದೇ ಇರುವು ದರಿಂದ ಸಮಸ್ಯೆ ಉಂಟಾಗಿದೆ ಎಂದರು.

ನಗರಾಡಳಿತಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಜನರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಸಲಹೆ ನೀಡಿದರು.

2012ರಲ್ಲಿ ನಗರಸಭಾ ಸದಸ್ಯರಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲು ಸೂಕ್ತವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಾಸ್ತಾವನೆಯನ್ನು ಸಲ್ಲಿಸುವ ನಿರ್ಣಯದೊಂದಿಗೆ ಸಭೆ ಮುಕ್ತಾಯಗೊಂಡಿತು. ಪೌರಾಯುಕ್ತ ಸಿ.ಡಿ.ದಳವಿ ಹಾಗೂ ಉಪಾಧ್ಯಕ್ಷ ಮಹೇಶ ಸಾವಂತ ಉಪಸ್ಥಿ ತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT