ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋರ್ಪಡೆ ಕೃತಿ ಕಂಚಿಯ ಪರಮಾಚಾರ್ಯ ಬಿಡುಗಡೆ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ವೈ. ಘೋರ್ಪಡೆ ಅವರು ರಚಿಸಿರುವ `ಕಂಚಿಯ ಪರಮಾಚಾರ್ಯ~ ಕೃತಿಯನ್ನು ಲೇಖಕಿ ಶಾಂತಾ ನಾಗರಾಜ್ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಶಾಂತಾ ನಾಗರಾಜ್, `ತಮ್ಮ ಆಧ್ಯಾತ್ಮಿಕ ಅನುಭವವನ್ನು ಘೋರ್ಪಡೆಯವರು ಉತ್ತಮವಾಗಿ ನಿರೂಪಿಸಿದ್ದಾರೆ. ಸಣ್ಣ ಪುಟ್ಟ ವಿವರಗಳಲ್ಲಿ ಪರಮಾಚಾರ್ಯರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನ ಉತ್ತಮವಾಗಿದೆ~ ಎಂದರು.

ವಿದುಷಿ ಟಿ.ಎಸ್. ಸತ್ಯವತಿ, `ಮಾನವ ಜೀವನದ ಅಂತಿಮ ಗುರಿ ಆನಂದದ ಹುಡುಕಾಟವೇ ಆಗಿದೆ. ಹಾಗಾಗಿ ಶಾಶ್ವತವಾದ ಆನಂದವನ್ನು ನೀಡುವ ಅಧ್ಯಾತ್ಮದ ಪಾಲನೆ ಕಷ್ಟಸಾಧ್ಯವಾದರೂ ಆದರ್ಶಮಯವಾಗಿರುತ್ತದೆ. ಘೋರ್ಪಡೆ ಅವರು ತಮ್ಮ ಅನುಭವವನ್ನು ಸರಳವಾಗಿ ನಿರೂಪಿಸಿರುವುದು ಉತ್ತಮವಾಗಿದೆ~ ಎಂದರು.

ಘೋರ್ಪಡೆ ಅವರು ಮಾತನಾಡಿ, `ನಾನು ಕಂಚಿಯ ಪರಮಾಚಾರ್ಯರನ್ನು ಕಂಡಾಗ ಅವರ ಕರುಣಾ ಮನೋಭಾವ ಗಮನ ಸೆಳೆಯಿತು. ಸ್ವಾಮೀಜಿ ಅವರೊಂದಿಗೆ ಕಳೆದ ಪ್ರತಿಯೊಂದು ಕ್ಷಣವೂ ರೋಮಾಂಚನ. ಅವರಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡೆ. ಅದನ್ನೆಲ್ಲಾ ಕೃತಿಯಲ್ಲಿ ನಿರೂಪಿಸಲು ಪ್ರಯತ್ನಿಸಿದ್ದೇನೆ~ ಎಂದರು.

ಎಚ್.ಎಚ್. ಮೋಹನ್, ಸೂರ್ಯಪ್ರಭಾದೇವಿ, ಕುಮಾರ್ ರಂಗನಾಥನ್, ಕೃಷ್ಣ ಚೆಂಗಡಿ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT