ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋಷಣೆ-ಅನುಷ್ಠಾನ: ಭಾರಿ ಅಂತರ!

Last Updated 9 ಫೆಬ್ರುವರಿ 2012, 18:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬಜೆಟ್ ಮತ್ತು ವಾಸ್ತವ ವೆಚ್ಚ, ಆದಾಯ ಸಂಗ್ರಹ ನಡುವೆ ಭಾರಿ ವ್ಯತ್ಯಾಸ ಇರುವುದನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ದೃಢ ಪಡಿಸಿದ್ದಾರೆ.

ಪಾಲಿಕೆಯ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಆರ್. ವಿ. ವೆಂಕಟೇಶ್ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.  2009-10ನೇ ಹಣಕಾಸು ವರ್ಷದಿಂದ ಬಿಬಿಎಂಪಿಯ ಬಜೆಟ್ ಘೋಷಣೆ ಮತ್ತು ಅನು ಷ್ಠಾನದ ನಡುವಿನ ಅಂತರ ಹೆಚ್ಚುತ್ತಿ ರುವುದು ಈ ಉತ್ತರದಲ್ಲಿದೆ.

2008-09ರಲ್ಲಿ ಪಾಲಿಕೆ ಬಜೆಟ್ ಮೊತ್ತ ರೂ 2,918 ಕೋಟಿ. ವಾಸ್ತವ ವಾಗಿ ರೂ 2,507 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ಅವಧಿಯಲ್ಲಿ ರೂ 2,432 ಕೋಟಿ ವೆಚ್ಚವಾಗಿತ್ತು. 2009-10ರಲ್ಲಿ ಬಜೆಟ್ ಮೊತ್ತ ರೂ 4,238 ಕೋಟಿಗೆ ಏರಿಕೆಯಾಗಿತ್ತು. ಆದರೆ, ವರಮಾನ ಸಂಗ್ರಹ ರೂ 3,661 ಕೋಟಿಗೆ ಕುಸಿದು, ರೂ 3,580 ಕೋಟಿ ಮಾತ್ರ ವೆಚ್ಚವನ್ನು ಮಾಡಲಾಗಿದೆ.

2010-11ನೇ ಅರ್ಥಿಕ ವರ್ಷದಲ್ಲಿ ಬಜೆಟ್ ಘೋಷಣೆ ಮತ್ತು ಅನು ಷ್ಠಾನದ ನಡುವಿನ ವ್ಯತ್ಯಾಸ ಅರ್ಧಕ್ಕಿಂತ ಹೆಚ್ಚು. ಈ ಅವಧಿಯಲ್ಲಿ ರೂ 8,862 ಕೋಟಿ ಮೊತ್ತದ ಬಜೆಟ್ ಮಂಡಿ ಸಲಾಗಿತ್ತು.
ಆದರೆ, ಸಂಗ್ರಹವಾದ ವರಮಾನದ ಮೊತ್ತ ರೂ 3,326 ಕೋಟಿ ಮಾತ್ರ. ಪಾಲಿಕೆಯ ಆಡಳಿತ ಮತ್ತು ನಗರದ ಅಭಿವೃದ್ಧಿಗಾಗಿ ಮಾಡಿದ ವೆಚ್ಚ ರೂ 3,620 ಕೋಟಿ.

2011-12ರಲ್ಲಿ ಮಂಡಿಸಿದ ಬಜೆಟ್ ಪ್ರಕಾರ ರೂ 9,401 ಕೋಟಿ ವೆಚ್ಚ ಮಾಡುವ ಪ್ರಸ್ತಾವವನ್ನು ಪ್ರಕಟಿಸಲಾಗಿತ್ತು. ರೂ 2,515 ಕೋಟಿ ರಾಜಸ್ವ ವೆಚ್ಚ ಮತ್ತು ರೂ 6,885 ಕೋಟಿ ಬಂಡವಾಳ ವೆಚ್ಚ ಇದರಲ್ಲಿ ಸೇರಿತ್ತು. ರೂ 5,144 ಕೋಟಿ ವರಮಾನ ಸಂಗ್ರ ಹದ ಗುರಿಯನ್ನೂ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು.

ಆದರೆ, ಕಳೆದ ಡಿಸೆಂಬರ್ ಅಂತ್ಯಕ್ಕೆ ಬಿಬಿಎಂಪಿ ಸಂಗ್ರಹಿಸಿದ ವರಮಾನದ ಮೊತ್ತ ಕೇವಲ ರೂ 1,556 ಕೋಟಿ. 1,268 ಕೋಟಿ ರೂಪಾಯಿ ರಾಜಸ್ವ ವೆಚ್ಚ ಮಾಡಿದ್ದರೆ, ರೂ 1,361 ಕೋಟಿ ಬಂಡವಾಳ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿಯವರು ಉತ್ತರದಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT