ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡೀಗಡ ಯುವಕರಿಗೆ ಎಕೆ-47ಖಯಾಲಿ!

Last Updated 6 ಅಕ್ಟೋಬರ್ 2011, 19:40 IST
ಅಕ್ಷರ ಗಾತ್ರ

ಚಂಡೀಗಡ: ಚಂಡೀಗಡ ಯುವಕರಲ್ಲಿ ಈಗ ಹೊಸ ಖಯಾಲಿ ಶುರುವಾಗಿದೆ. ಅದೆಂದರೆ ಎಕೆ-47 ಮತ್ತು ಎಕೆ-56. ಆದರೆ ಇವು ಭಯೋತ್ಪಾದನೆಗೆ ಬಳಸುವ ಬಂದೂಕುಗಳಲ್ಲ. ಬದಲು ಬೈಕ್ ಮತ್ತು ಕಾರಿನ ಅತಿ ಹೆಚ್ಚು ದರದ ನೋಂದಣಿಯ ಸಂಖ್ಯೆಗಳು!

ಚಂಡೀಗಡದ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರ ಶುಕ್ರವಾರ ಈ ಸಂಖ್ಯೆಗಳನ್ನು ಹರಾಜು ಹಾಕಲು ಸಜ್ಜಾಗಿದೆ. ನಗರ, ಪಂಜಾಬ್‌ನ  ಸುಮಾರು 20ಕ್ಕೂ ಹೆಚ್ಚು ಯುವಕರು ಇದರಲ್ಲಿ ಪಾಲ್ಗೊಂಡು ಈ ಎರಡು ವಿಶೇಷ ಸಂಖ್ಯೆಗಳ `ಹೆಮ್ಮೆಯ~ ಮಾಲೀಕರಾಗಲು ಯತ್ನಿಸಲಿದ್ದಾರೆ.

ಕಳೆದ ವರ್ಷ ನೋಂದಣಿ ಸಂಖ್ಯೆ 0001 ಚಂಡೀಗಡ ಆಡಳಿತಕ್ಕೆ ರೂ 10 ಲಕ್ಷದ ಭಾರಿ ಮೊತ್ತವನ್ನು ಗಳಿಸಿಕೊಟ್ಟಿತ್ತು. ಈ ಸಲ ಎಕೆ-47 ಮತ್ತು ಎಕೆ-56 ಸಂಖ್ಯೆಗಳು ಇತರ ಎಲ್ಲಾ ವಿಶೇಷ ಸಂಖ್ಯೆಗಳನ್ನೂ ಮೀರಿ ಹೆಚ್ಚಿನ ದರಕ್ಕೆ ಬಿಕರಿಯಾಗಲಿವೆ ಎಂಬ ವಿಶ್ವಾಸ ಅಧಿಕಾರಿಗಳದ್ದು.

ಈ ಎರಡು ಸಂಖ್ಯೆಗಳಿಗೆ ಹರಾಜು ಪ್ರಕ್ರಿಯೆ ರೂ 10 ಸಾವಿರದಿಂದ ಆರಂಭವಾಗಲಿದ್ದು, ಸುಮಾರು 25 ಮಂದಿ ಸವಾಲಿಗೆ ಸಿದ್ಧರಾಗಿದ್ದಾರೆ.

`ನಂಬರ್ ಪ್ಲೇಟ್ ಮೇಲೆ ವಿಶೇಷ ಅಥವಾ ವಿಐಪಿ ಸಂಖ್ಯೆ ಹೊಂದುವುದು ನಗರದ ಯುವಕರಿಗೆ ಪ್ರತಿಷ್ಠೆಯ ವಿಷಯ. ಹಾಗಾಗಿ ಇಂತಹ ಸಂಖ್ಯೆಗಳನ್ನು ಪಡೆಯಲು ಅವರು ಭಾರಿ ಮೊತ್ತ ತೆರಲೂ ಸಿದ್ಧರಾಗಿರುತ್ತಾರೆ~ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳುತ್ತಾರೆ.

ಇದೇ ಕಾರಣಕ್ಕಾಗಿ ಆಡಳಿತ ವರ್ಗ ಕೆಲ ವರ್ಷಗಳ ಹಿಂದೆ ಇಂತಹ ಸಂಖ್ಯೆಗಳನ್ನು ವಿತರಿಸುವುದನ್ನೇ ಹಣ ಮಾಡುವ ಕಾರ್ಯಕ್ರಮವಾಗಿ ಮಾಡಿಕೊಂಡಿದೆ ಎಂದೂ ಅವರು ಹೇಳುತ್ತಾರೆ. ಈ ಹರಾಜಿನಲ್ಲಿ ಎಕೆ-47 ಸಂಖ್ಯೆಗೆ ಅತಿ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ ಸುಮಾರು 500 ನೋಂದಣಿ ಸಂಖ್ಯೆಗಳನ್ನು ಹರಾಜು ಮೂಲಕ ವಿತರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT