ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಮೇಲೆ ನೌಕೆ ಇಳಿಸಿದ ಚೀನಾ

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೀಜಿಂಗ್‌ (ಐಎಎನ್‌ಎಸ್‌): ಚೀನಾ ಕಳುಹಿಸಿರುವ ಚಾಂಗ್‌–3 ಉಪಗ್ರಹ ಚಂದ್ರನ ಮೇಲೆ ಶನಿವಾರ ಯಶಸ್ವಿ­ಯಾಗಿ ಇಳಿದಿದೆ.
ಚೀನಾ ಕಾಲಮಾನ ಶನಿವಾರ ರಾತ್ರಿ 9 ಗಂಟೆಗೆ ದೇಶದ ಮೊದಲ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಮೇಲೆ ಇಳಿದಿದೆ ಎಂದು ಬೀಜಿಂಗ್‌ ಬಾಹ್ಯಾಕಾಶ ನಿಯಂತ್ರಣ ಕೇಂದ್ರ ತಿಳಿಸಿದೆ.

ಇದರೊಂದಿಗೆ ಚೀನಾ, ಚಂದ್ರನ ನೆಲದ ಮೇಲೆ ನೌಕೆಯನ್ನು ಯಶಸ್ವಿ­ಯಾಗಿ  ಇಳಿಸಿದ ಮೂರನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಅಮೆರಿಕ ಮತ್ತು ಸೋವಿಯತ್‌ ಒಕ್ಕೂಟ ಚಂದ್ರನ ಅಂಗಳದ ಮೇಲೆ ನೌಕೆ ಇಳಿಸಿದ್ದವು.

ಚಾಂಗ್‌–3 ಚೀನಾದ ಎರಡನೇ ಚಂದ್ರಯಾನ ಯೋಜನೆಯಾಗಿದ್ದು, ನೌಕೆಯು ಭೂಮಿಯಿಂದ ಚಂದ್ರನ ಮೇಲೆ ಇಳಿದು ಹಿಂತಿರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT