ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಬಾಬು ನಾಯ್ಡು ನೋಡಲು ನೂಕುನುಗ್ಗಲು

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗೌರಿಬಿದನೂರು: ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಮಂಗಳವಾರ ಗೌರಿಬಿದನೂರು ಮಾರ್ಗವಾಗಿ ಹಿಂದೂಪುರಕ್ಕೆ ತೆರಳುವ ಸಂದರ್ಭದಲ್ಲಿ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಟ್ಟಣದ ಮಾರ್ಗವಾಗಿ ಹಿಂದೂಪುರಕ್ಕೆ ತೆರಳುತ್ತಾರೆ ಎಂಬ ವಿಷಯ ತಿಳಿದು ಅವರನ್ನು ಸ್ವಾಗತಿಸಲು ಭಾರಿ ಸಂಖ್ಯೆಯಲ್ಲಿ ಜನರು ಪಟ್ಟಣದ ನಾಗಯ್ಯರೆಡ್ಡಿ ವೃತ್ತದಲ್ಲಿ ನೆರೆದಿದ್ದರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಪಟ್ಟಣದ ಮೂಲಕ ಚಂದ್ರಬಾಬು ನಾಯ್ಡು ಪ್ರಯಾಣಿಸಲಿದ್ದಾರೆ ಎಂಬ ವಿಷಯ ಹರಡಿದ ಕಾರಣ ಅವರಿಗೆ ಹೂಮಾಲೆ ಹಾಕಲು ಜನರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಸಂಜೆ 5 ಗಂಟೆಯಾದರೂ ಅವರು ಬಾರದ ಕಾರಣ ನಿರಾಸೆ ಮೂಡಿತಾದರೂ ಜನರು ಸ್ಥಳದಿಂದ ಕದಲಲಿಲ್ಲ. ನಂತರ ನಾಯ್ಡು ಆಗಮಿಸಿದರು.

ಜನರನ್ನು ಚದುರಿಸಲು ಮತ್ತು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ರಸ್ತೆ, ಪಾದಚಾರಿ ಮಾರ್ಗ, ಅಂಗಡಿ-ಮುಂಗಟ್ಟುಗಳಲ್ಲಿ ನಿಲ್ಲಲು ಸ್ಥಳಾವಕಾಶ ಸಿಗದೆ ಜನರು ಬಹುಮಹಡಿಗಳ ಕಟ್ಟಡಗಳ ಮೇಲೆ ಹತ್ತಿದರು. ಅಲ್ಲಿಂದಲೇ ನಾಯ್ಡು ಅವರತ್ತ ಕೈಬೀಸಿ,ಶುಭ ಹಾರೈಸಿದರು.

ಜನರ ನೂಕುನುಗ್ಗಾಟದ ನಡುವೆಯೇ ಮಾಜಿ ಶಾಸಕರಾದ ಎನ್.ಜ್ಯೋತಿರೆಡ್ಡಿ, ಅಶ್ವತ್ಥನಾರಾಯಣರೆಡ್ಡಿ ಅವರು ನಾಯ್ಡು ಅವರಿಗೆ ಹೂಮಾಲೆ ಹಾಕಿದರು.
 
`ನಾಯ್ಡು ಅವರೊಂದಿಗೆ ನಮ್ಮ ಮೆಚ್ಚಿನ ನಟ ಜೂನಿಯರ್ ಎನ್‌ಟಿಆರ್ ಬರುತ್ತಾರೆಂದು ಭಾವಿಸಿದ್ದೆವು. ಅವರು ಕಾರಿನಲ್ಲಿ ಇರಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಅವರು ಬಾರದ ಕಾರಣ ಸ್ವಲ್ಪ ಬೇಸರವಾಯಿತು. ಆದರೂ ಗೌರಿಬಿದನೂರಿನಲ್ಲೇ ಇದ್ದುಕೊಂಡು ನಾಯ್ಡು ಅವರನ್ನು ನೋಡಲು ಅವಕಾಶ ಸಿಕ್ಕಿತು ಎಂಬುದೇ ಸಮಾಧಾನ~ ಎಂದು ನೆರೆದಿದ್ದ ಜನರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT