ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಭಾಗ ಚಂದಭಾಗ

Last Updated 19 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಚಂದ್ರಭಾಗ ಎಂಬುದು ಸಮುದ್ರ ತೀರದ ಹೆಸರು. ತನ್ನ ವಿಭಿನ್ನ ವಿನ್ಯಾಸದಿಂದಲೇ ಇದು ಹೆಸರುವಾಸಿ. ಒಡಿಶಾ ರಾಜ್ಯದ ಕೋನಾರ್ಕ್‌ನ ಸೂರ್ಯ ದೇವಾಲಯದ ಸಮೀಪ ಇದೆ ಈ ಚಂದ್ರಭಾಗ ಕಡಲತಡಿ. ವರ್ಷಕ್ಕೆ ಒಂದು ಬಾರಿ ಇಲ್ಲಿ ಜಾತ್ರೆ ನಡೆಯುತ್ತದೆ. ಆ ಮೂಲಕ ಒಡಿಶಾದ ಸಂಸ್ಕೃತಿ ಅಲ್ಲಿ ಅನಾವರಣಗೊಳ್ಳುತ್ತದೆ.

ಉಳಿದಂತೆ ಈಜಲು ಮತ್ತು ಬೋಟಿಂಗ್ ಮಾಡಲು ಈ ಸಮುದ್ರ ತೀರ ಸೂಕ್ತ ಜಾಗ. ವಿಶ್ರಾಂತಿ ಪಡೆಯಲಂತೂ ಪ್ರವಾಸಿಗರ ದಂಡೇ ಇಲ್ಲಿಗೆ ಬರುತ್ತದೆ.
ಕೋನಾರ್ಕ್‌ನ ಸೂರ್ಯ ದೇವಾಲಯದಿಂದ ಕೇವಲ 2 ಕಿ.ಮೀ ದೂರದಲ್ಲಿ ಇರುವ ಈ ಚಂದ್ರಭಾಗಕ್ಕೆ ಹೋದ ಮೇಲೆ ಚಿಲಿಕಾ ಸರೋವರದ ಪಕ್ಷಿಧಾಮದ ದಾರಿ ದೂರವೇನಿಲ್ಲ. ಹತ್ತಿರದಲ್ಲಿಯೇ ವಸತಿ ಗೃಹಗಳು, ಹೋಟೆಲ್‌ಗಳು ಬೇಕಾದಷ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT