ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರತೀರ್ಥದೊಳಗೆ ಶೇಷಾದ್ರಿ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಬೆಟ್ಟದ ಜೀವ~ ಯಶಸ್ಸಿನ ನಂತರ ನಿರ್ದೇಶಕ ಪಿ.ಶೇಷಾದ್ರಿ ಸಿನಿಮಾ ಚಟುವಟಿಕೆಗಳಿಗೆ ಅಲ್ಪ ವಿರಾಮ ನೀಡಿ ಕಿರುತೆರೆಯತ್ತ ಮರಳಿ ಹೊರಳಿದ್ದಾರೆ. ಅವರ ನಿರ್ದೇಶನದ `ಚಕ್ರತೀರ್ಥ~ ದೈನಿಕ ಧಾರಾವಾಹಿ ಫೆ.27ರ ಸೋಮವಾರದಿಂದ `ಈ ಟೀವಿ~ಯಲ್ಲಿ ಪ್ರಸಾರ ಆರಂಭಿಸಲಿದೆ. ನಿರ್ಮಾಣ ಕೂಡ ಅವರದ್ದೇ.

ಧಾರಾವಾಹಿಯಲ್ಲಿನ `ಚಕ್ರತೀರ್ಥ ಒಂದು ಹಿನ್ನೀರ ದ್ವೀಪ. ಅದ್ಭುತ ಪ್ರೇಕ್ಷಣೀಯ ಸ್ಥಳ. `ಕೋರಿಕೆ ಗುಡ್ಡ~ ಎನ್ನುವುದು ಅದರ ಇನ್ನೊಂದು ಹೆಸರು. ಬದುಕಿನ ಉನ್ನತಿಯನ್ನು ಅರಸಿ ಕೆಲವರು ಅಲ್ಲಿಗೆ ಹೋದರೆ, ಇನ್ನು ಕೆಲವರು ಸಾಯಲು ಹೋಗುತ್ತಾರೆ! ಒಂದು ದಿನ, `ಚಕ್ರತೀರ್ಥ~ಕ್ಕೆ ಬಂದವರ ನಡುವೆ ಎರಡೂ ತರಹದ ಜನ ಇದ್ದರು.

ಬೆಳಗ್ಗೆ ಹೋಗಿ ಸಂಜೆ ತಮ್ಮ ಮನೆಗಳಿಗೆ ವಾಪಸ್ ಆಗಬೇಕಾದವರು ಪ್ರಕೃತಿಯ ವಿಕೋಪಕ್ಕೆ ಸಿಲುಕಿ ದ್ವೀಪದಲ್ಲಿ ಎರಡು ದಿನ ಬಂಧಿಯಾದರು. ಆ ಅವಧಿ ಅವರುಗಳ ಬದುಕಿಗೆ ದೊಡ್ಡ ತಿರುವನ್ನೇ ತಂದುಬಿಟ್ಟಿತು! ಹೀಗೆ ಸಾಗುತ್ತದೆ ಚಕ್ರತೀರ್ಥದ ಸುಳಿಗೆ ಸಿಕ್ಕವರ ಕಥೆ...

ಉತ್ತರ ಮತ್ತು ದಕ್ಷಿಣ ಧ್ರುವಗಳಂತಹ ಸೋದರಿಯರು, ಪತಿಯನ್ನು ಕಳಕೊಂಡ ಹೆಣ್ಣುಮಗಳು, ಕೊಲೆಯೊಂದರ ಷಡ್ಯಂತ್ರ, ಕುಡುಕ ಫೋಟೊಗ್ರಾಫರ್- ಹೀಗೆ, ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಭಿನ್ನ ಸ್ವರೂಪದ ಪಾತ್ರಗಳು ಕಥೆಯ ತಿರುವುಗಳಲ್ಲಿ ಜೀವಗೊಳ್ಳುತ್ತಾ ಹೋಗುತ್ತವೆ.

`ಚಕ್ರತೀರ್ಥ~ ಮೂಲಕ ಒಂದಷ್ಟು ಹೊಸ ಕಲಾವಿದರನ್ನು ಶೇಷಾದ್ರಿ ಕಿರುತೆರೆಗೆ ಪರಿಚಯಿಸುತ್ತಿದ್ದಾರೆ. ರಶ್ಮಿ, ಜ್ಯೋತಿ, ಅಕ್ಷತಾ, ಮಾಲಾ, ಶಶಿರಾವ್, ಸಿದ್ದು, ಸದಾನಂದ, ಅಶ್ವಿಲ್ ಸರಾವ್ ತಾರಾಗಣದಲ್ಲಿರುವ ಕೆಲವರು. ಸೋಮವಾರದಿಂದ ಶುಕ್ರವಾರದವರೆಗೆ, ಮಧ್ಯಾಹ್ನ 1ಕ್ಕೆ ಧಾರಾವಾಹಿ ಪ್ರಸಾರಗೊಳ್ಳಲಿದೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT