ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಚತುರ್ಭುಜ'ದಲ್ಲಿ ಚರಣದಾಸ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಪಾರ್ವತಿ ಪರಮೇಶ್ವರ' ಹಾಸ್ಯ ಧಾರಾವಾಹಿಯಲ್ಲಿ ಲಾಯರ್ ಗುಂಡಣ್ಣನ ಪಾತ್ರದಲ್ಲಿ ನಗಿಸಿದ ನಗೆನಟ ಲೋಕೇಶ್ ಬಸವಟ್ಟಿ ಬೆಳ್ಳಿತೆರೆಯಲ್ಲಿ ನಾಯಕರಾಗುತ್ತಿದ್ದಾರೆ. ಚಿತ್ರದ ಹೆಸರು `ಚತುರ್ಭುಜ'.

`ನಟನಾ' ನಾಟಕ ತಂಡದಲ್ಲಿ ಸಕ್ರಿಯರಾಗಿದ್ದ ಲೋಕೇಶ್ ಕಿರುತೆರೆಯತ್ತ ಮುಖ ಮಾಡಿದ್ದರು. ಇದೀಗ ನಾಯಕರಾಗುವ ಅವಕಾಶ ಪಡೆದುಕೊಂಡಿದ್ದಾರೆ. ಸಿನಿಮಾಗಾಗಿ ಚರಣದಾಸ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ನಿರ್ದೇಶಕ ಕೃಷ್ಣ ಲೇಖನ್ ತಮ್ಮ ಕನಸು ಮತ್ತು ನೋವುಗಳನ್ನು ಹಂಚಿಕೊಳ್ಳಲು ಆರಿಸಿಕೊಂಡ ವೇದಿಕೆ ಸಿನಿಮಾ! ಹಾಗೆಂದು ಏಕಾಏಕಿ ಚಿತ್ರರಂಗಕ್ಕೆ ಧುಮುಕದೇ ಸಹಾಯಕ ನಿರ್ದೇಶಕರಾಗಿ ಹತ್ತು ವರ್ಷ ಪಳಗಿದ ಅವರು ಇದೀಗ ಕತೆ ಸಿದ್ಧಪಡಿಸಿಕೊಂಡು ನಿರ್ದೇಶಕರಾಗಲು ಹೊರಟಿದ್ದಾರೆ.

`ಚತುರ್ಭುಜ' ಚಿತ್ರದ ಹೆಸರಿಗೆ ತಕ್ಕಂತೆ ಕತೆಯನ್ನು ಸಿದ್ಧಪಡಿಸಿದ್ದಾರಂತೆ. ಚಿತ್ರದ ಕತೆಯ ಬಗ್ಗೆ ಹೆಚ್ಚು ಮಾತನಾಡದ ಅವರು ಈ ಮೊದಲು `ಬ್ರೂಸ್ ಲೀ' ಚಿತ್ರವನ್ನು ಪ್ರಕಟಿಸಿ ಕೈಬಿಟ್ಟಿದ್ದರು. `ಚತುರ್ಭುಜ' ಚಿತ್ರವನ್ನು ಬೆಂಗಳೂರು, ದಾಂಡೇಲಿ, ಕಾರವಾರ, ಕಾಳಹಸ್ತಿಯಲ್ಲಿ ಚಿತ್ರೀಕರಿಸುತ್ತಿದ್ದಾರೆ.

ನಿರ್ಮಾಪಕ ಶಿವನಂಜಪ್ಪ ಹದಿನೈದು ವರ್ಷಗಳಿಂದ ಸಿನಿಮಾ ಮಾಡಬೇಕೆಂದು ಕನಸು ಕಟ್ಟಿದ್ದವರಂತೆ. ನಾಯಕಿ ಶ್ರೇಯಾ ಮಂಗಳೂರು ಹುಡುಗಿ. ಚಿತ್ರೀಕರಣ ಆರಂಭಕ್ಕೆ ಮುನ್ನ ನಿರ್ದೇಶಕರು ನೀಡಿರುವ ಕಾರ್ಯಾಗಾರದ ಕಲಿಕೆ ತಮ್ಮಲ್ಲಿ ಆತ್ಮವಿಶ್ವಾಸ ತುಂಬಿದೆ ಎಂದರವರು. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ `ಲೂಸಿಯಾ' ಮತ್ತು `ನಾನು ನಮ್ಮುಡ್ಗಿ' ಚಿತ್ರಕ್ಕೆ ರಾಗ ಸಂಯೋಜಿಸಿರುವವರು. ಇದು ಅವರ ಮೂರನೇ ಸಿನಿಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT