ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಪಟಾಕಿ ಮಳಿಗೆಗಳ ಆರಂಭ

Last Updated 22 ಅಕ್ಟೋಬರ್ 2011, 5:45 IST
ಅಕ್ಷರ ಗಾತ್ರ

ಚನ್ನಗಿರಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಬರುವ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದ ಮುಂದೆ ದೀಪಾವಳಿ ಹಬ್ಬದ ಅಂಗವಾಗಿ ಶುಕ್ರವಾರ ಪಟಾಕಿ ಮಳಿಗೆಗಳನ್ನು ತೆರಯಲಾಗಿದ್ದು, ಮಾರಾಟ ಪ್ರಾರಂಭಿಸಿವೆ.
ಪ್ರತಿವರ್ಷ ಪೊಲೀಸ್ ಠಾಣೆಯ ಮುಂದೆ ಪಟಾಕಿಗಳ ಅಂಗಡಿಗಳನ್ನು ತೆರೆಯಲು ಪ.ಪಂ. ಅನುಮತಿ ನೀಡುತ್ತಿತ್ತು.
ಆದರೆ, ಈ ಬಾರಿ ಸ್ಥಳವನ್ನು ಬದಲಾವಣೆ ಮಾಡಲಾಗಿದೆ. ಅ. 25ರಿಂದ ಮೂರು ದಿನಗಳ ಕಾಲ ದೀಪಾವಳಿ ಹಬ್ಬವನ್ನು ತಾಲ್ಲೂಕಿನಾದ್ಯಂತ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಅಂಗವಾಗಿ ಎಲ್ಲಾ ಬಟ್ಟೆ ಅಂಗಡಿಗಳಲ್ಲಿ ಬಟ್ಟೆಗಳನ್ನು ಖರೀದಿಸಲು ಸಾರ್ವಜನಿಕರು ಮುಗಿ ಬೀಳುತ್ತಿದ್ದಾರೆ. ದೀಪಾವಳಿಯನ್ನು ಎಲ್ಲಾ ವರ್ಗದ ಜನರು ಕಡ್ಡಾಯವಾಗಿ ಆಚರಿಸುತ್ತಾರೆ.

ಪದಕಗಳ ಸುರಿಮಳೆ
ಪಟ್ಟಣದ ಶಿವಲಿಂಗೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕ್ರೀಡಾಪಟುಗಳು ಈಚೆಗೆ ಚಿತ್ರದುರ್ಗದಲ್ಲಿ ನಡೆದ ಅಂತರ ಜಿಲ್ಲಾಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿ ಹೆಚ್ಚಿನ ಪದಕಗಳನ್ನು ಗಳಿಸಿದ್ದಾರೆ.
ಪುರುಷರ ವಿಭಾಗ: ಪಿ. ರೇವೇಶ್, ಎಚ್.ಆರ್. ಅಜಯ್, ಚಂದ್ರಶೇಖರ್, ನವಾಬ್ ಖಾನ್ ಚಿನ್ನದ ಪದಕ. ಪಿ.ಆರ್. ವೀರೇಶ್, ಪಿ.ಟಿ. ಸಾವನ್, ಆನಂದ್ ಬೆಳ್ಳಿ ಪದಕ, ಅಜಯ್, ನವಾಬ್ ಖಾನ್, ಸಂತೋಷ್ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಮಹಿಳೆಯರ ವಿಭಾಗ: ಕೀರ್ತಿ ಡಯಾನ ಡಿಸೋಜ್, ಯಶ್ವಸಿನಿ, ವಾಣಿ, ಕವಿತಾ 2 ಹಾಗೂ ಗೀತಾ 1 ಚಿನ್ನದ ಪದಕ, ಶೀಲಾ, ಪುಷ್ಪಾ, ಶ್ರುತಿ ಪಾಟೀಲ್ 2 ಬೆಳ್ಳಿ, ಗೀತಾ, ಶಾಲಿನಿ, ವಿದ್ಯಾ 1 ಬೆಳ್ಳಿ, ಮಮತಾ 2, ಶಾಲಿನಿ, ಶುಕ್ಲ ತಲಾ ಒಂದು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ದೈಹಿಕ ಶಿಕ್ಷಕ ನಾಗೇಂದ್ರನಾಯ್ಕ, ಸಿ.ಎಲ್. ಮಂಜುನಾಥ್, ಜಗನ್ನಾಥ್ ತರಬೇತುದಾರರಾಗಿ ತರಬೇತಿ ನೀಡಿದ್ದರು. ಈ ಕ್ರೀಡಾಪಟುಗಳಿಗೆ ಪ್ರಾಂಶುಪಾಲ ಜಿ.ಆರ್. ಈಶ್ವರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT