ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗುಂಡಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ

Last Updated 21 ಸೆಪ್ಟೆಂಬರ್ 2011, 6:25 IST
ಅಕ್ಷರ ಗಾತ್ರ

ಸರಗೂರು: ಶಿಕ್ಷಕರು ಇಲ್ಲ ಎಂಬ ಕಾರಣಕ್ಕೆ ಸಮೀಪದ ಚನ್ನಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕರಿಲ್ಲ. ನಿಯೋಜನೆ ಆಧಾರದ ಮೇಲೆ ಜಿನ್ನಹಳ್ಳಿಯ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಿಂದಿ ಶಿಕ್ಷಕಿ ಎನ್.ಜೆ. ಅನಿತಾ ಅಥವಾ ಬೇರೆಯವರನ್ನು ಇಲ್ಲಿಗೆ ನೇಮಕ ಮಾಡಬೇಕು.

2005ರಿಂದ ಇಲ್ಲಿಯ ತನಕ ಹಿಂದಿ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಿಂದಿ ಶಿಕ್ಷಕರನ್ನು ನೇಮಕ ಮಾಡಿ ಎಂದು ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐಗೆ ಹಲವು ಭಾರಿ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಇದ ರಿಂದ ಶಾಲೆಗೆ ಬೀಗಹಾಕಿದ್ದೇವೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಹೇಳಿದರು.

ಗ್ರಾಮವು ಕಾಡಂಚಿನ ಪ್ರದೇಶ ವಾಗಿದೆ. ಇಲ್ಲಿಗೆ ಬಂದ ಶಿಕ್ಷಕರು ಹೆಚ್ಚು ಕಾಲ ಕೆಲಸ ಮಾಡುತ್ತಿಲ್ಲ. ಇಲ್ಲಿನ ಶಿಕ್ಷಕರು ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ. ಶಾಲೆ ಪ್ರಾರಂಭವಾದ 1 ಗಂಟೆ ನಂತರ ಬರುತ್ತಾರೆ. ಮತ್ತೆ 3 ಗಂಟೆಗೆ ಊರಿಗೆ ಹೋಗಲು ತಯಾರಾಗುತ್ತಾರೆ. ಸ್ವಾತಂತ್ರ್ಯ ದಿನಾಚರಣೆ ದಿನ ಶಿಕ್ಷಕರು ಬೆಳಿಗ್ಗೆ 9.30ಕ್ಕೆ ಬಂದಿದ್ದಾರೆ. ಅವರು ಬರುವ ತನಕ ಶಾಲೆಯಲ್ಲಿ ಕಾದು ನಂತರ ಧ್ವಜಾರೋಹಣ ಮಾಡಲಾಯಿತು ಎಂದು ಆರೋಪಿಸಿದರು.

ಶನಿವಾರ ಯಾರಾದರು ಒಬ್ಬರು ಶಿಕ್ಷಕರು ಇರುತ್ತಾರೆ. ಉಳಿದ ಶಿಕ್ಷಕರು ಶಾಲೆಗೆ ಬರುವುದಿಲ್ಲ. ನಿಯೋಜನೆಯಲ್ಲಿ ಅರಳಹಳ್ಳಿ ಶಾಲೆಯಿಂದ ಒಬ್ಬ ಶಿಕ್ಷಕರು ಬಂದಿದ್ದಾರೆ. ಇಲ್ಲಿ 1- 8ನೇ ತರಗತಿಯ ವರಗೆ ಇದೆ. 89 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಗಂಡು ಮಕ್ಕಳು 46, ಹೆಣ್ಣು ಮಕ್ಕಳು 43 ಮಕ್ಕಳು ಇದ್ದಾರೆ. ಇವರೆಲ್ಲ ತೊಂದರೆ ಅನುಭವಿಸಿದ್ದಾರೆ ಎಂದರು.

ಶಿಕ್ಷಣ ಸಂಯೋಜಕ ನಿರ್ಸಾದ್ ಅಹಮದ್ ಮಾತನಾಡಿ, ಚನ್ನಗುಂಡಿ ಶಾಲೆಯಿಂದ ಜಿನ್ನಹಳ್ಳಿ ಶಾಲೆಗೆ ನಿಯೋಜನೆಯಲ್ಲಿ ಹೋಗಿರುವ ಹಿಂದಿ ಶಿಕ್ಷಕಿ ಎನ್.ಜೆ. ಅನಿತಾರವರು ಇಲ್ಲೇ ಕೆಲಸ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದರು. ಆ ನಂತರ ಪ್ರತಿಭಟನೆ ಪಾವಸ್ ಪಡೆಯಲಾಯಿತು.

ಶಾಲೆಗೆ ಗ್ರಾಮಸ್ಥರು ಬೀಗ ಜಡಿದ ಕಾರಣ ಅರಳಿ ಮರದ ಕೆಳಗೆ ಪಾಠ ನಡೆದವು. ಗ್ರಾಮದ ಯಜಮಾನರಾದ ನಾಗೇಂದ್ರ ಮಾತನಾಡಿದರು. ಎಸ್‌ಡಿ ಎಂಸಿ ಅಧ್ಯಕ್ಷ ಮಲ್ಲಪ್ಪ, ನಾಗೇಂದ್ರ, ನಾಗೇಶ್, ನಿಜಗುಣ, ಪ್ರಭುಸ್ವಾಮಿ, ಲಿಂಗರಾಜು, ಭವಾನಿ, ಮಂಜು, ರಾಜಶೇಖರ್, ಮಲ್ಲುಸ್ವಾಮಿ, ಮಹೇದ್ರ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT