ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: 29 ನಾಮಪತ್ರ ಕ್ರಮಬದ್ಧ

Last Updated 19 ಏಪ್ರಿಲ್ 2013, 13:35 IST
ಅಕ್ಷರ ಗಾತ್ರ

ಚನ್ನಪಟ್ಟಣ: ವಿಧಾನಸಭಾ ಚುನಾವಣೆಗೆ 21 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ 30 ನಾಮಪತ್ರಗಳಲ್ಲಿ 29 ನಾಮಪತ್ರ ಕ್ರಮಬದ್ಧವಾಗಿವೆ ಎಂದು ಚುನಾವಾಣಾ ಅಧಿಕಾರಿ ಜಯಮಾಧವನ್ ತಿಳಿಸಿದ್ದಾರೆ.

ಗುರುವಾರ ನಡೆದ ನಾಮಪತ್ರ ಪರಿಶೀಲನೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಸಲ್ಲಿಸಿದ್ದ 3 ನಾಮಪತ್ರಗಳ ಪೈಕಿ ಒಂದು ನಾಮಪತ್ರ ತಿರಸ್ಕೃತವಾಯಿತು. ಅನಿತಾ ಅವರು ಜೆಡಿಎಸ್ ಬಿ ಫಾರಂ ನೀಡಿ ಸಲ್ಲಿಸಿದ್ದ ಉಳಿದ ಎರಡು ನಾಮಪತ್ರ ಕ್ರಮಬದ್ಧವಾಗಿವೆ ಎಂದು ತಿಳಿಸಿದರು.

ಬಿಜೆಪಿಯಿಂದ ರವಿಕುಮಾರ್‌ಗೌಡ, ಕಾಂಗ್ರೆಸ್‌ನಿಂದ ಸಾದತ್ ಆಲಿಖಾನ್, ಬಿಎಸ್ಪಿಯಿಂದ ಸುಜೀವನ್‌ಕುಮಾರ್ ಅವರ ನಾಮಪತ್ರ ಕ್ರಮಬದ್ಧವಾಗಿವೆ.

ನೋಂದಾಯಿತ ರಾಜಕೀಯ ಪಕ್ಷಗಳಾದ ಹಿಂದೂಸ್ತಾನ್ ಜನತಾ ಪಾರ್ಟಿಯಿಂದ ಅಶ್ರಫ್, ಲೋಕಜನಶಕ್ತಿ ಪಾರ್ಟಿಯಿಂದ ಕೆ.ಎಚ್.ಕುಮಾರ್, ಕರ್ನಾಟಕ ಜನತಾ ಪಕ್ಷದಿಂದ ಬಿ.ನಾಗರಾಜು, ಅಂಬೇಡ್ಕರ್ ನ್ಯಾಷನಲ್ ಕಾಂಗ್ರೆಸ್‌ನಿಂದ ಮುಜಾಮಿಲ್ ಪಾಷಾ, ಜೆಡಿಯುನಿಂದ ಎಂ.ಸಿ.ವಿ.ಮೂರ್ತಿ, ಭಾರತೀಯ ಅಂಬೇಡ್ಕರ್ ಜನತಾ ಪಾರ್ಟಿಯಿಂದ ಶಿವರುದ್ರಯ್ಯ ಸಲ್ಲಿಸಿರುವ ನಾಮಪತ್ರ ಕ್ರಮಬದ್ಧವಾಗಿವೆ.

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಅಪ್ಪಾಜಿಗೌಡ, ಜುಲ್ಫೀಕರ್ ಆಲಿಖಾನ್, ಜೈಕಿಸಾನ್, ಜೆ.ಟಿ.ಪ್ರಕಾಶ್, ಬೀಬಿ ಜಾನ್, ಟಿ.ಎಂ.ಮಂಚೇಗೌಡ, ಎಂ. ಯೋಗೇಶ್, ರತ್ನಮ್ಮ, ಸುವರ್ಣ, ಸೈಯದ್ ಜುಲ್ಫೀಕರ್ ಮೆಹದಿ ಅವರು ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿವೆ.

ಬೀಬಿ ಜಾನ್ ಅಂಗನವಾಡಿ ಕಾರ್ಯಕರ್ತೆಯಾಗಿ ಹಾಗೂ ಬೂತ್‌ಮಟ್ಟದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ನಾಮಪತ್ರದ ಕ್ರಮಬದ್ಧತೆ ಬಗ್ಗೆ ಏ.19 ರ ಬೆಳಿಗ್ಗೆ 11 ಗಂಟೆಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಜಯಮಾಧವನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT