ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಕಾಮಗಾರಿಗೆ ಚಾಲನೆ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ಪಟ್ಟಣದ ಪುರಸಭೆ ಒಂದನೇ ವಾರ್ಡ್ ವ್ಯಾಪ್ತಿಯ ಪ್ರಸನ್ನಹಳ್ಳಿ ಬಡಾವಣೆಯಲ್ಲಿ ಹತ್ತು ಲಕ್ಷರೂ ವೆಚ್ಚದ ಸಿಮೆಂಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಕೆ ಪುರಸಭೆ ಅಧ್ಯಕ್ಷೆ ರತ್ನಮ್ಮ ಹಾಗೂ ಸ್ಥಾಯಿ ಸಮಿತಿ ಹನುಮಂತಪ್ಪ ಚಾಲನೆ ನೀಡಿದರು.

ಈ ಕುರಿತು ಮಾತನಾಡಿದ ವಾರ್ಡ್ ಸದಸ್ಯ ಜಿ.ಜನಾರ್ಧನ್, 2010-11ನೇ ಸಾಲಿನ ಎಸ್.ಎಫ್.ಸಿ.ಯೋಜನೆಯಡಿಯಲ್ಲಿ 145 ಮೀ.ಸಿಮೆಂಟ್ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಸಲಾಗುತ್ತಿದೆ, ಗುಣಮಟ್ಟ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ, ಆದರೆ ಕಳಪೆ ಕಂಡುಬಂದಲ್ಲಿ ಸ್ಥಳಿಯರು ಗಮನಕ್ಕೆ ತರಬೇಕು ಎಂದರು.

ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಮುನಿಶಾಮೇಗೌಡ, ಪುರಸಭೆ ಮುಖ್ಯಾಧಿಕಾರಿ ಬಿ.ಎನ್.ಮುನಿಸ್ವಾಮಿ, ಉಪಾಧ್ಯಕ್ಷ ಕೃಷ್ಣಕುಮಾರಿ, ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಅಶ್ವಥ್, ಮಲ್ಲಿಕಾರ್ಜುನ ಕುಮಾರ್, ಸಿದ್ದಲಿಂಗ, ವಿ.ನಾರಾಯಣಸ್ವಾಮಿ, ಎ.ಇ.ಇ ಚಂದ್ರಶೇಖರ್ ಇದ್ದರು.

21ರಂದು ಧರಣಿ
ದೇವನಹಳ್ಳಿ: ಪರಿಶಿಷ್ಠ ಜಾತಿ ಮತ್ತು ವರ್ಗಗಳ ಸವಲತ್ತು ಕಬಳಿಸಲು ಸುಳ್ಳು ಜಾತಿ ಪತ್ರ ಪಡೆದಿರುವವರ ವಿರುದ್ಧ ಕ್ರಿಮಿನಲ್ ದಾವೆಗೆ ಒತ್ತಾಯಿಸಿ ಅಕ್ಟೊಬರ್ 21ರಂದು ಮುಖ್ಯಮಂತ್ರಿನಿವಾಸದ ಮುಂದೆ ತಾಲ್ಲೂಕಿ ದ.ಸಂ.ಸ ವತಿಯಿಂದ ಧರಣಿ ನಡೆಸಲಾಗುವುದೆಂದು ತಾಲ್ಲೂಕು ದ.ಸಂ.ಸ ಸಂಚಾಲಕ ತಿಮ್ಮರಾಯಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ. ಅಂಬೇಡ್ಕರ್ ಅವಿಶ್ರಾಂತಿ ಹೋರಾಟದ ಫಲವಾಗಿ ಮೀಸಲಾತಿ ದೊರೆತಿದೆ ಆದರೆ ಇತರೆ ಸಮುದಾಯದ ಉತ್ತಮ ಸ್ಥಿತಿಯಲ್ಲಿದ್ದರೂ ಅನ್ಯಾಯಕ್ಕೆ ಒಳಗಾದ ಜನರ ಶಿಕ್ಷಣ ಹಾಗೂ ಉದ್ಯೋಗ ಕಸಿಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ತಾಲ್ಲೂಕು ಸಂಘಟನಾ ಸಂಚಾಲಕ ಸಿ.ಡಿ.ಮೋಹನ್, ರಾಮನಾಥಪುರ ಮುನಿರಾಜು, ಶ್ರಿನಿವಾಸ್, ಕೆಂಪಣ್ಣ, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT