ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಸ್ವಚ್ಛಗೊಳಿಸಲು ಆಗ್ರಹ

Last Updated 4 ಜನವರಿ 2014, 8:29 IST
ಅಕ್ಷರ ಗಾತ್ರ

ಯಾದಗಿರಿ: ಸಮೀಪದ ವಡಗೇರಾದ ಗ್ರಾಮದಲ್ಲಿ ಪಂಚಾಯಿತಿ ಇದ್ದರೂ ಇಲ್ಲದಂತಾಗಿದೆ. ರಸ್ತೆಯ ಮೇಲೆ ಚರಂಡಿಯ ನೀರು ಹರಿಯುತ್ತಿದ್ದರೂ, ಯಾವು­ದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮದ ಒಂದನೇ ಬ್ಲಾಕ್‌ನ ಜನರು ದೂರಿದ್ದಾರೆ.

ಪಂಚಾಯಿತಿ, ವಿಶೇಷ ತಹಸೀಲ್ದಾರ್ ಕಾರ್ಯಾಲಯ, ಪ್ರೌಢಶಾಲೆಗೆ, ಪ್ರಾಥಮಿಕ ಶಾಲೆಗೆ ಇದೇ ರಸ್ತೆಯ ಮೂಲಕ ಹೋಗಬೇಕು. ವಿದ್ಯಾರ್ಥಿ­ಗಳು, ಹೊಲಸು ನೀರು ರಸ್ತೆಯ ಮೇಲೆ ನಿಂತಿರುವುದರಿಂದ ಅಲ್ಲಲ್ಲಿ ಗುಂಡಿಗ­ಳಾಗಿವೆ. ಅದರಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಇದರಿಂದಾಗಿ ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರ ಜೊತೆ ರೋಗ ರುಜಿನುಗಳ ಹರಡುವ ಭೀತಿ ಕಾಡುತ್ತಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ.

ಗ್ರಾಮದ ಒಂದನೇ ಬ್ಲಾಕ್‌ನ ಚಂಡಿಗಳಲ್ಲಿ ತ್ಯಾಜ್ಯ ತುಂಬಿದೆ. ಇದರಿಂ­ದಾಗಿ ಚರಂಡಿಯಲ್ಲಿ ಹರಿ­ಯುವ ನೀರು ರಸ್ತೆಯ ಮೇಲೆ ಬರುತ್ತಿದೆ. ಚರಂಡಿಯ ನೀರು ಮನೆಗೆ ನುಗ್ಗಿದ ಉದಾಹರಣೆ ಗಳು ಇವೆ. ಬಡಾವಣೆಯ ತುಂಬ ಕಸದ ರಾಶಿ ತುಂಬಿದೆ. ಸ್ವಚ್ಛತೆಯೇ ಇಲ್ಲದಂತಾ­ಗಿದೆ ಎಂದು ನಿವಾಸಿಗಳು ದೂರುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಚರಂಡಿಯ ನೀರು ರಸ್ತೆ­ಯ ಮೇಲೆ ಹರಿಯದಂತೆ ಕ್ರಮ ತೆಗೆದು­ಕೊಳ್ಳಬೇಕು ಎಂದು ಜನರು ಆಗ್ರಹಿಸಿ­ದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT