ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆಯ ವಿಚಿತ್ರ!

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೈಸೂರು ವಿಶ್ವವಿದ್ಯಾಲಯದ 1974ರ ಘಟಿಕೋತ್ಸವದಲ್ಲಿ ನಾನು ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಒಟ್ಟಿಗೇ ಪದವಿ ಪಡೆದೆವು. ನನ್ನದು ಪಿಎಚ್‌.ಡಿ.; ಅವರದು ಎಂ.ಎ. (ಸುವರ್ಣ ಪದಕ ಸಹಿತ). ಆಗ ಶ್ರೀಕಂಠದತ್ತರು ಯಾವ ಪ್ರಭಾವಳಿಯೂ ಇಲ್ಲದ ಒಬ್ಬ ‘ಸಾಮಾನ್ಯ’ ವಿದ್ಯಾರ್ಥಿ!

ವಿಪರ್‍ಯಾಸವೆಂದರೆ, 1961 ಮತ್ತು 62ರ ಘಟಿಕೋತ್ಸವಗಳಲ್ಲಿ ನಾನು ಆನರ್ಸ್‌ ಮತ್ತು ಎಂ.ಎ. ಪದವಿಗಳನ್ನು ಪಡೆದಾಗ, ಶ್ರೀಕಂಠದತ್ತರ ತಂದೆ ಜಯ­ಚಾಮರಾಜ ಒಡೆಯರು ಅಧ್ಯಕ್ಷತೆ ವಹಿಸಿದ್ದರು, ವಿಶ್ವವಿದ್ಯಾಲಯದ ‘ಕುಲಾ­ಧಿಪತಿ’(?)ಗಳಾಗಿ, (ಅದೇನು ವೈಭವ!) ಕೇವಲ 12 ವರ್ಷಗಳ ಅವಧಿಯಲ್ಲಿ ಕಾಲಪುರುಷ ತಂದ ಪರಿವರ್ತನೆ ಎಂಥದು! ಅವನು ಸಂಕಲ್ಪಿಸಿದ್ದರೆ ವೇದಿಕೆಯ ಮೇಲೆ ತಂದೆಯ ಸ್ಥಾನವನ್ನು ಅಲಂಕರಿಸಬೇಕಿದ್ದ ಶ್ರೀಕಂಠದತ್ತರು ಮುಖ ಸಪ್ಪಗೆ ಮಾಡಿಕೊಂಡು, ಕೇಳುವವರೇ ಇಲ್ಲದೆ, ಕೆಳಗೆ ಕುಳಿತಿದ್ದರು!

ಒಟ್ಟಿನಲ್ಲಿ, ಚರಿತ್ರೆಯ ವಿಚಿತ್ರಗಳು ಸಖೇದಾಶ್ಚರ್ಯಕರವಲ್ಲವೆ? ಸದ್ಯ ಚರಿತ್ರೆಯ ಒಂದು ಭಾಗವಾಗಿ ಹೋಗಿದ್ದಾರೆ, ಶ್ರೀಕಂಠದತ್ತರು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT