ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ: ಹೊಸ ಕಾಯ್ದೆಗೆ ಮನವಿ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಂಪೂರ್ಣವಾಗಿ ಕನ್ನಡ ಹೆಸರು ಇರುವ ಮತ್ತು ರಿಮೇಕ್ ಅಲ್ಲದ ಚಲನಚಿತ್ರಗಳಿಗೆ ಮಾತ್ರ ಸಬ್ಸಿಡಿ, ತೆರಿಗೆ ವಿನಾಯಿತಿ ಮತ್ತಿತರ ಸೌಲಭ್ಯಗಳನ್ನು ನೀಡುವ ಸಂಬಂಧ ಹೊಸ ಕಾಯ್ದೆ ರೂಪಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ಚಂದ್ರು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

`ಕನ್ನಡ ಚಲನಚಿತ್ರಗಳಿಗೆ ಸರ್ಕಾರ ನೀಡುವ ಸೌಲಭ್ಯಗಳ ಸದುಪಯೋಗ ಆಗಬೇಕು ಎಂಬುದು ನನ್ನ ಆಶಯ. ಆದ್ದರಿಂದ ಸರ್ಕಾರ ಆದ್ಯತೆ ಮೇರೆಗೆ ಹೊಸ ಕಾಯ್ದೆ ಮತ್ತು ನಿಯಮಗಳನ್ನು ರೂಪಿಸಲು ಕ್ರಮಕೈಗೊಳ್ಳಬೇಕು~ ಎಂದು ಮುಖ್ಯಮಂತ್ರಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚಂದ್ರು, 2010ರಲ್ಲಿ ಸೆನ್ಸಾರ್ ಮಂಡಳಿ 145 ಕನ್ನಡ ಚಲನ ಚಿತ್ರಗಳಿಗೆ ಪರವಾನಗಿ ನೀಡಿದ್ದು, ಇದರಲ್ಲಿ ಶೇ 50ರಷ್ಟು ರಿಮೇಕ್ ಚಿತ್ರಗಳಾಗಿವೆ. ಕನ್ನಡದಲ್ಲದ ಶೀರ್ಷಿಕೆ ಬಳಸಲಾಗಿದೆ. ಇದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT