ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರಗಳಲ್ಲಿ ಅಶ್ಲೀಲತೆ ತಡೆಯಲು ವಿವಿಧ ಸಂಘಟನೆಗಳ ಮನವಿ

Last Updated 24 ಸೆಪ್ಟೆಂಬರ್ 2013, 8:09 IST
ಅಕ್ಷರ ಗಾತ್ರ

ದಾವಣಗೆರೆ: ಕನ್ನಡ ಚಲನಚಿತ್ರಗಳಲ್ಲಿ ಅಶ್ಲೀಲತೆ ಹಾಗೂ ಹಿಂಸಾಚಾರದ ವೈಭವೀಕರಣ ವಿರೋಧಿಸಿ ನಗರದ ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಹಣ ಗಳಿಸುವುದನ್ನೇ ಮುಂದಿಟ್ಟುಕೊಂಡು ಮಹಿಳೆಯರನ್ನು ಅರೆ ನಗ್ನಾವಸ್ಥೆಯಲ್ಲಿ ನಿರ್ಮಾಪಕರು, ನಿರ್ದೇಶಕರು ಚಿತ್ರಿಸುತ್ತಿದ್ದಾರೆ. ಅಲ್ಲದೇ, ಅಸಂಬದ್ಧ ಸಾಹಿತ್ಯ ಹಾಗೂ ಸಂಗೀತ ಯುವ ಜನರನ್ನು ದಾರಿ ತಪ್ಪಿಸುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಎಂದು ಸಚಿವರಿಗೆ ಮನವಿ ಮಾಡಲಾಯಿತು.

ಕಿರ್‍ವಾಡಿ ಗಿರಿಜಮ್ಮ, ಯಶಾ ದಿನೇಶ್‌, ಸಾಲಿಗ್ರಾಮ ಗಣೇಶ್‌ ಶೆಣೈ, ಕೆ.ಎಚ್‌.ಮಂಜುನಾಥ್‌, ಬೇಳೂರು ಸಂತೋಷಕುಮಾರ್‌ ಶೆಟ್ಟಿ, ರೇಖಾ ಓಂಕಾರಪ್ಪ, ಹೇಮಾ ಶಾಂತಪ್ಪ ಪೂಜಾರಿ, ಸರೋಜಾ ಚಂದ್ರಶೇಖರ, ಶಶಿಕಲಾ ರುದ್ರಯ್ಯ, ಸುಜಾತಾ ರವೀಂದ್ರ, ಪುಟ್ಟಮ್ಮ ಮಹಾರುದ್ರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT