ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿ: ಇಬ್ಬರ ಸಾವು

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಿಮಪಾತವಾಗುತ್ತಿದ್ದು, ಮರಗಟ್ಟುವ ಚಳಿಯಿಂದಾಗಿ ಜಮ್ಮು ನಗರದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

ಸಾವಿಗೀಡಾದವರಲ್ಲಿ ಒಬ್ಬ ಸಾಧು, ಮತ್ತೊಬ್ಬ ಭಿಕ್ಷುಕ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಗರದ ಸೇರಿದಂತೆ ಕಾಶ್ಮೀರ ಕಣಿವೆಯ ಬಹುತೇಕ ಪ್ರದೇಶದಲ್ಲಿ ಹಿಮಪಾತವಾಗುತ್ತಿದ್ದು, ಶುಕ್ರವಾರ 294 ಕಿ.ಮೀ. ಉದ್ದದ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಲ್ಲಿಸಲಾಗಿತ್ತು.

ಗುರುವಾರ ರಾತ್ರಿಯಿಂದ ಸುರಿದ ಹಿಮದಿಂದಾಗಿ ಇಡೀ ಕಣಿವೆಯು ಶ್ವೇತ ವಸ್ತ್ರ ಹೊದ್ದಂತೆ ಭಾಸವಾಯಿತು.


ಉತ್ತರಾಖಂಡದ ಮುಸ್ಸೂರಿ, ಗಡವಾಲ್, ಚಮೋಲಿ, ಪಿತೋರ್‌ಗಡ ಮತ್ತಿತರ ಪ್ರದೇಶಗಳೂ ತೀವ್ರ ಚಳಿಗೆ ಸಿಲುಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT