ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದಲ್ಲಿ ಪುರುಷರ ಚರ್ಮದ ಆರೈಕೆ

Last Updated 4 ನವೆಂಬರ್ 2013, 19:30 IST
ಅಕ್ಷರ ಗಾತ್ರ

ದಿನದಿನವೂ ನೀಟ್‌ ಶೇವ್‌ ಮಾಡಿ ಕಚೇರಿಗೆ ಹೋಗುವ ಪುರುಷರ ಮುಖ ಬಿರುಸಾಗುವುದೇ ಚಳಿಗಾಲದ ಪರಿಣಾಮ.
ಮಾಯಿಶ್ಚರೈಸರ್‌ನ ನಿರಂತರ ಉಪಯೋಗದಿಂದ ಚರ್ಮದ ಮೃದುತ್ವವನ್ನು ಮರಳಿಪಡೆಯಬಹುದು ಎಂದು ಚರ್ಮ ತಜ್ಞರು ಹೇಳುತ್ತಾರೆ.

ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಮಹಿಳೆಯರು ನೀಡುವಷ್ಟು ಮಹತ್ವ ಪುರುಷರು ನೀಡುವುದಿಲ್ಲ. ಅಷ್ಟು ಪುರುಸೊತ್ತು ಎನ್ನುವುದಕ್ಕಿಂತಲೂ ಸಂಯಮವಾಗಲೀ ವ್ಯವಧಾನವಾಗಲೀ ಅವರಲ್ಲಿ ಇರುವುದಿಲ್ಲ. ಆದರೆ ಚರ್ಮದ ಮೃದುತ್ವವನ್ನು ಕಳೆದುಕೊಳ್ಳುವುದು ಮಾತ್ರ ಯಾರೂ ಇಷ್ಟ ಪಡಲಾರರು. ಪುರುಷರ ಚರ್ಮ ಸಂರಕ್ಷಣೆಗೆ ಸುಲಭವಾದ ಐದು ಸಾಧ್ಯತೆಗಳು ಇಲ್ಲಿವೆ.

ಸುದೀರ್ಘ ಸ್ನಾನ ಬೇಡ: ಹೆಚ್ಚಾಗಿ ಪುರುಷರು ತಮ್ಮ ಸ್ನಾನವನ್ನು ಸುದೀರ್ಘವಾಗಿಸುತ್ತಾರೆ. ಸಾಮಾನ್ಯವಾಗಿ ಅರ್ಧ ಮುಕ್ಕಾಲು ಗಂಟೆ ಬಚ್ಚಲುಮನೆಯಲ್ಲಿ ಕಳೆಯುವುದಂತೂ ಬಹುತೇಕರ ದಿನಚರಿಯಾಗಿರುತ್ತದೆ. ಈ ಸ್ನಾನವನ್ನು ಮೊಟಕುಗೊಳಿಸಿ.

ಸುದೀರ್ಘಸ್ನಾನದಿಂದ ಚರ್ಮ ತನ್ನ ತೈಲಗುಣವನ್ನು ಕಳೆದುಕೊಂಡು ಒಣಚರ್ಮವಾಗುವ ಸಂಭವ ಹೆಚ್ಚಾಗಿರುತ್ತದೆ. ಸುಡುಸುಡು ನೀರಿನ ಸ್ನಾನ ಬೇಡ. ಉಗುರುಬಿಸಿ ನೀರಿನ ಸ್ನಾನವೇ ಒಳಿತು. ಸ್ಟ್ರಾಂಗು ಸೋಪುಗಳ ಬದಲಿಗೆ ಸೌಮ್ಯ ಕ್ಲೀನ್ಸರ್‌ಗಳನ್ನು ಬಳಸುವುದು ಒಳಿತು.

ಎಚ್ಚರದ ಕ್ಷೌರ: ಮುಖಕ್ಷೌರ ಮಾಡುವ ಮುನ್ನ, ಕ್ರೀಮ್‌ ಲೋಷನ್‌ ಅಥವಾ ಜೆಲ್‌ ಲೇಪಿಸಿಕೊಳ್ಳುವುದು ಉತ್ತಮ. ಸ್ವಚ್ಛ ಮತ್ತು ಹರಿತವಾದ ಬ್ಲೇಡು ಬಳಸುವುದರಿಂದಲೂ ಮುಖದ ಚರ್ಮ ಮೃದುವಾಗಿರುತ್ತದೆ.

ಮೈ ಒರೆಸುವುದು ಬೇಡ: ಹೆಚ್ಚಾಗಿ ಪುರುಷರು ಸ್ನಾನವಾದೊಡನೆ, ಉಜ್ಜುವುದರ ಮುಂದುವರಿದ ಭಾಗ ಎಂಬಂತೆ ಟವಲ್‌ನಿಂದ ಮೈ ಉಜ್ಜಿಕೊಳ್ಳುತ್ತಾರೆ. ಇದೂ ಸಹ ಒಣ ಚರ್ಮಕ್ಕೆ ಕಾರಣವಾಗುತ್ತದೆ. ಟವಲ್‌ನಿಂದ ನಿಧಾನವಾಗಿ ದೇಹಕ್ಕೆ ಸ್ಪರ್ಶಿಸುವಂತೆ, ಮುತ್ತಿಡುವಂತೆ ಒರೆಸಿಕೊಳ್ಳಬೇಕು. ತೇವಾಂಶ ಉಳಿದರೂ ಚಿಂತೆ ಇಲ್ಲ. ಇದು ಚರ್ಮ ಕೋಮಲವಾಗಿ ಉಳಿಯುವಂತೆ ನೋಡಿಕೊಳ್ಳುತ್ತದೆ.

ಮಾಯಿಶ್ಚರೈಸರ್‌ ಬಳಕೆ: ನಿಮ್ಮ ಚರ್ಮಕ್ಕೆ ಹೊಂದುವ ಮಾಯಿಶ್ಚರೈಸರ್‌ ಅನ್ನು ಸ್ನಾನದ ನಂತರ ಪ್ರತಿದಿನವೂ ಲೇಪಿಸಿಕೊಳ್ಳುವುದು ಚರ್ಮದ ಕೋಮಲತನವನ್ನು ಸಂರಕ್ಷಿಸುತ್ತದೆ.

ತುಟಿಗೆ ಬಾಮ್‌: ತುಟಿ ಒಡೆಯುವುದು ಈ ಕಾಲದಲ್ಲಿ ಸಾಮಾನ್ಯ. ಕೆಲಸಕ್ಕೆ ಹೋಗುವಾಗ ಪ್ಲೇನ್‌ ಲಿಪ್‌ ಬಾಮ್‌ ಅನ್ನು ಬಳಸುವುದು ಒಳಿತು. ಹೆಚ್ಚಾಗಿ ಬಾಮ್‌ ಲೇಪನದಿಂದ ತುಟಿಗೆ ಹೊಳಪು ಕಂಡು ಬರುತ್ತದೆ ಎಂದು ಪುರುಷರು ಬಳಸುವುದಿಲ್ಲ.

ಆದರೆ ಲಿಪ್‌ ಬಾಮ್‌ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸಿದ ನಂತರ ತುಟಿಯನ್ನು ಟಿಶ್ಯು ಪೇಪರ್‌ನಿಂದ ಒರೆಸಿದರೆ ಆ ಹೊಳಪು ಕಂಡು ಬರದು. ಧೂಮಪಾನ ಬಿಟ್ಟರೆ ತುಟಿಯ ಸೌಂದರ್ಯವನ್ನು ಸಹಜವಾಗಿಯೇ ಕಾಪಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT