ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಗಲೇರಾ: ಸಪ್ತಾಹ ಭಜನೆ

Last Updated 15 ಆಗಸ್ಟ್ 2012, 9:25 IST
ಅಕ್ಷರ ಗಾತ್ರ

ಚಿಟಗುಪ್ಪಾ: ಹತ್ತಿರದ ಸುಕ್ಷೇತ್ರ ಚಾಂಗಲೇರಾದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸ ನಿಮಿತ್ತ ಹಲವು ಭಕ್ತಿಪರ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುತ್ತಲಿವೆ.

ದಿನಂ ಪ್ರತಿ ತ್ರಿಕಾಲ ಸಂಗೀತ ರುದ್ರಾಭಿಷೇಕ ಪೂಜೆ ದೇವರಿಗೆ ನಡೆಯುತ್ತಲಿದೆ, ಜಂಗಮ ಪಾದ ಪೂಜೆ, ಭಕ್ತರಿಂದ ಜರುಗುತ್ತಿದೆ. ದಿನಾಲೂ ದೇವಾಲಯಕ್ಕೆ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ವಿಶೇಷ ದಾಸೋಹ ವ್ಯವಸ್ತೆ ಕಲ್ಪಿಸಲಾಗಿದೆ.

ದಿನದ 24 ಗಂಟೆ ದೇವಾಲಯದಲ್ಲಿ ಸಪ್ತಾಹ ಭಜನೆ ನಡೆಯುತ್ತಿದೆ. ಸರದಿಯಂತೆ ಚಾಂಗಲೇರಾ, ಬಸಿಲಾಪೂರ್, ಮೀನಕೇರಾ, ಮುತ್ತಂಗಿ ಇತರೆಡೆಗಳಿಂದ ಭಜನಾ ತಂಡದವರು ಆಗಮಿಸಿ ಸಪ್ತಾಹದಲ್ಲಿ ಭಕ್ತಿಯ ಸೇವೆ ಸಲ್ಲಿಸುತ್ತಲಿದ್ದಾರೆ.

ದಿನಾಲೂ ದರ್ಶನಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ದರ್ಶನಕ್ಕಾಗಿ ವಿಶೇಷ ಸಾಲುಗಳ ವ್ಯವಸ್ಥೆ ನಿರ್ಮಿಸಲಾಗಿದೆ. ಸಪ್ತಾಹ ಜೊತೆಗೆ ಹಲವು ಸಂಗೀತ ಕಲಾವಿದರಿಂದ ಭಜನ ಸಂಗೀತವೂ ನಡೆಯುತ್ತಿದೆ. ಈ ಬಾರಿಯ ಕಾರ್ಯಕ್ರಮಗಳು ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಮೈಮನ ತಣಿಸುವಂತಾಗಿರುವುದು ವಿಶೇಷತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT