ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್‌ ಲೀಗ್‌: ಪಾಕ್‌ ತಂಡಕ್ಕೆ ವೀಸಾ

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನದ ದೇಸಿ ಟ್ವೆಂಟಿ–20 ಚಾಂಪಿಯನ್‌ ತಂಡ ಫೈಸಲಾಬಾದ್‌ ವೂಲ್ವ್ಸ್‌ಗೆ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಲು ಅವಕಾಶ ಲಭಿಸಿದೆ.

ಫೈಸಲಾಬಾದ್‌ನ ತಂಡ ಸೆಪ್ಟೆಂಬರ್‌ 17 ರಿಂದ ಆರಂಭವಾಗಲಿರುವ ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆಡಲಿದೆ. ಈ ತಂಡದ ಆಟಗಾರರಿಗೆ ವೀಸಾ ನೀಡಲು ಭಾರತ ನಿರಾಕರಿಸಿತ್ತು. ಆದ್ದರಿಂದ ತಂಡ ಭಾರತಕ್ಕೆ ಬರುವುದು ಅನುಮಾನ ಎನಿಸಿತ್ತು.

ಇದೀಗ ಭಾರತ ಸರ್ಕಾರ ವೀಸಾ ನೀಡಲು ಒಪ್ಪಿರುವ ಕಾರಣ ಮಿಸ್ಬಾ ಉಲ್‌ ಹಕ್‌ ನೇತೃತ್ವದ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ‘ಎಲ್ಲ ಆಟಗಾರರಿಗೆ ಈಗಾಗಲೇ ವೀಸಾ ನೀಡಲಾಗಿದೆ’ ಎಂದು ಅಧಿಕೃತ ಮೂಲ ತಿಳಿಸಿದೆ.

ಪಾಕ್‌ನಿಂದ ಆಗಮಿಸುವ ತಂಡದ ಆಟಗಾರರಿಗೆ ಭದ್ರತೆ ನೀಡುವುದು ಕಷ್ಟ ಎಂಬ ಕಾರಣ ಭಾರತ ವೀಸಾ ನೀಡಲು ಮೊದಲು ನಿರಾಕರಿಸಿತ್ತು. ಫೈಸಲಾಬಾದ್‌ ತಂಡ ತನ್ನ ಮೂರು ಅರ್ಹತಾ ಪಂದ್ಯಗಳನ್ನು ಮೊಹಾಲಿಯಲ್ಲಿ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT