ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕರಿಗೆ ನೇತ್ರ ಶಿಬಿರ

Last Updated 16 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ


ನಮ್ಮ ದೇಶದಲ್ಲಿ ಪ್ರತಿವರ್ಷ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಒಂದು ಲಕ್ಷ ಮೀರಿದೆ. 4.5 ಲಕ್ಷಕ್ಕೂ ಹೆಚ್ಚು ಜನರು ಗಾಯಾಳುಗಳಾಗುತ್ತಾರೆ. 

ಚಾಲಕರ ಕಣ್ಣು
ನಮ್ಮ ನಿತ್ಯದ ಶೇ 90ರಷ್ಟು ಚಟುವಟಿಕೆಗಳಿಗೆ ದೃಷ್ಟಿಯ ಅಗತ್ಯ ಇದೆ. ಹೊತ್ತು ಗೊತ್ತಿನ ಪರಿವೆಯಿಲ್ಲದೆ ಅತಿ ಹೆಚ್ಚು ಕಾಲ ಹೆದ್ದಾರಿಗಳಲ್ಲಿ, ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ, ರಾತ್ರಿ ವೇಳೆ ವಾಹನ ಚಾಲನೆ ಮಾಡುವಾಗ ಪ್ರಕಾಶಮಾನವಾದ ಬೆಳಕು ಚಾಲಕರ ಕಣ್ಣಿನ ಮೇಲೆ ಒತ್ತಡ ಉಂಟುಮಾಡುತ್ತದೆ.   

 ಚಾಲನೆಯ ವೇಳೆ ಸ್ಪಷ್ಟ ದೃಷ್ಟಿ ಅತ್ಯಂತ ಅಗತ್ಯ. ಸಾಮಾನ್ಯವಾಗಿ ರಾತ್ರಿ ವೇಳೆ ದೃಷ್ಟಿಯ ತೊಂದರೆ ಹೆಚ್ಚು. ಅಂತರ, ರಸ್ತೆಯ ಚಿಹ್ನೆಗಳು, ರಸ್ತೆ ದೀಪಗಳು, ಪರಿಸರದಲ್ಲಿ ಕ್ಷಣಾರ್ಧದಲ್ಲಿ ಉಂಟಾಗುವ ಬದಲಾವಣೆಗಳು ಎಲ್ಲವನ್ನೂ ಗ್ರಹಿಸಬೇಕಾಗುತ್ತದೆ.

ದೃಷ್ಟಿ ಮಂದವಾಗಿದ್ದಾಗ ರಸ್ತೆ ಸಂಚಾರದ ದೀಪಗಳನ್ನು ಕರಾರುವಾಕ್ಕಾಗಿ ಗುರುತಿಸುವುದು ಕಷ್ಟವಾಗುತ್ತದೆ.

* ಚಾಲನೆಯ ವೇಳೆ ಕನ್ನಡಕ ಧರಿಸಲು ವೈದ್ಯರು ಸೂಚನೆ ನೀಡಿದ್ದರೆ ತಪ್ಪದೇ ಪಾಲಿಸಬೇಕು.
* ಸೂರ್ಯನ ಕಿರಣಗಳಿಂದ, ಅತಿನೇರಳೆ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ತಂಪು ಕನ್ನಡಕ ಬಳಸಬೇಕು.
* ಗಾಢ ಬಣ್ಣದ ತಂಪು ಕನ್ನಡಕಗಳಿಂದ ರಸ್ತೆ ಸಂಚಾರದ ಚಿಹ್ನೆಗಳನ್ನು ಗುರುತಿಸುವುದು ಕಷ್ಟವಾಗಬಹುದು.
* ವಾಹನದ ಗಾಜಿನ ಪರದೆಯ ಒಳಮೈ ಮತ್ತು ಹೊರಮೈಗಳೆರಡೂ ಸ್ವಚ್ಛವಾಗಿರಬೇಕು.
*ವಾಹನಗಳ ನಿಯಮಿತ ತಪಾಸಣೆಯಂತೆಯೇ ನೇತ್ರ ತಪಾಸಣೆಯೂ ನಿಯಮಿತವಾಗಿರಲಿ.
ಮಾಹಿತಿಗೆ: www.sankareye.com


 2010ರಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 44,489 ಜನ ಗಾಯಗೊಂಡಿದ್ದಾರೆ. ಅದರಲ್ಲೂ ಬೆಂಗಳೂರು ನಗರದಲ್ಲಿ ನಡೆದ 762 ಅಪಘಾತಗಳಲ್ಲಿ 803 ಜನರು ಕೊನೆಯುಸಿರೆಳೆದಿದ್ದಾರೆ, 4493 ಜನ ಗಾಯಗೊಂಡಿದ್ದಾರೆ.

 ಪಾದಚಾರಿಗಳು, ಶಾಲಾ ಮಕ್ಕಳು, ಚಾಲಕರನ್ನು ಇಂತಹ ಅವಘಡದಿಂದ ರಕ್ಷಿಸುವುದು ಮುಖ್ಯ. ಜತೆಗೆ ಚಾಲಕರ ದೃಷ್ಟಿ ಉತ್ತಮವಾಗಿರುವುದು ಕೂಡ ಸುರಕ್ಷಿತ ಚಾಲನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಈ ಕಾರಣದಿಂದಲೇ ಶಂಕರ ನೇತ್ರ ಚಿಕಿತ್ಸಾಲಯ ಚಾಲಕರಿಗೆ ಉಚಿತ ಸಮಗ್ರ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿತ್ತು. ಸರ್ಕಾರಿ ಹಾಗೂ ಖಾಸಗಿ ವಲಯದ ಕಾರು, ಬಸ್ ಮತ್ತು ಇತರ ವಾಹನಗಳ 370 ಚಾಲಕರ ನೇತ್ರ ತಪಾಸಣೆ ನಡೆಸಲಾಯಿತು. ಈ ಪೈಕಿ ಶೇ 15ರಷ್ಟು ಚಾಲಕರಲ್ಲಿ ತೀವ್ರತರವಾದ ದೃಷ್ಟಿದೋಷ ಕಂಡುಬಂದಿತು. ಶೇ 14ರಷ್ಟು ಚಾಲಕರಿಗೆ ಕನ್ನಡಕ ಅಥವಾ ವಿಸ್ತೃತ ತಪಾಸಣೆಗೆ ಸಲಹೆ ನೀಡಬೇಕಾಯಿತು. ಶೇ 5ರಷ್ಟು ಜನರಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಕಂಡುಬಂದಿತು.

ಶೇ 60ರಷ್ಟು ಚಾಲಕರಿಗೆ ಕಣ್ಣಿನ ಆರೋಗ್ಯ ಎಷ್ಟು ಮಹತ್ವ ಎಂಬುದರ ಅರಿವಿರಲಿಲ್ಲ. ಈ ದೃಷ್ಟಿಯಿಂದ ಶಿಬಿರವು ಬಹಳ ಪ್ರಯೋಜನಕಾರಿಯಾಯಿತು. ಅಲ್ಲದೆ ಚಾಲಕರಿಗೆ ಶಂಕರ ನೇತ್ರಾಲಯದಲ್ಲಿ ರಿಯಾಯ್ತಿ ದರದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು.                                         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT