ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕರಿಗೆ ಪರವಾನಗಿ ಪತ್ರ ಕಡ್ಡಾಯ: ಡಿವೈಎಸ್‌ಪಿ

Last Updated 13 ಡಿಸೆಂಬರ್ 2012, 8:00 IST
ಅಕ್ಷರ ಗಾತ್ರ

ಮಾನ್ವಿ: ವಾಹನಗಳ ಚಾಲಕರು ಚಾಲನೆಯ ಪರವಾನಗಿ ಪತ್ರ ಹೊಂದುವುದು ಕಡ್ಡಾಯವಾಗಿದೆ ಎಂದು ಡಿವೈಎಸ್‌ಪಿ ವೀರೇಶ ಬೆಳವಡಿ ಹೇಳಿದರು. 

ಬುಧವಾರ ತಾಲ್ಲೂಕಿನ ಜಾನೇಕಲ್ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಲನೆ ಪರವಾನಗಿ ಪತ್ರ ವಿತರಣಾ ಮೇಳ ಉದ್ಘಾಟಿಸಿ ಮಾತನಾಡಿದರು.

ಆರ್‌ಟಿಒ ವೆಂಕಟೇಶ್ವರರಾವ್ ಮಾತನಾಡಿ, ಗ್ರಾಮೀಣ ಭಾಗದ ವಾಹನ ಚಾಲಕರ ನೆರವಿಗಾಗಿ ಹಮ್ಮಿಕೊಳ್ಳಲಾಗುವ  ಇಂತಹ ಮೇಳಗಳನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್‌ಪಾಷ ದಿದ್ದಗಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. 

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದೀಪಕ್ ಬೂಸರೆಡ್ಡಿ, ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟರೆಡ್ಡಿ ರಾಜಲಬಂಡಾ, ಪದಾಧಿಕಾರಿಗಳಾದ ಬಸವರಾಜ ಮಾಲೀಪಾಟೀಲ್, ಸೂಗರಯ್ಯ ಸ್ವಾಮಿ, ಬಸವರಾಜ, ವಿಶ್ವನಾಥಗೌಡ, ಲಿಯಾಖತ್, ಅಬ್ಬು ಮೇಸ್ತ್ರಿ, ನಾರಾಯಣ ಕಡಗಂದೊಡ್ಡಿ, ದೊಡ್ಡ ದೇವೇಂದ್ರಪ್ಪ, ಶಂಭುನಗೌಡ, ಚಂದ್ರಯ್ಯ ಸ್ವಾಮಿ, ಭೀಮಣ್ಣ ಈಳಿಗೇರ್, ಪ್ರಹ್ಲಾದರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT