ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚಲಿ ಮಾಯಕ್ಕಾದೇವಿಯ ಉತ್ಸವ ಇಂದಿನಿಂದ

Last Updated 16 ಅಕ್ಟೋಬರ್ 2012, 8:35 IST
ಅಕ್ಷರ ಗಾತ್ರ

ರಾಯಬಾಗ:  ನವರಾತ್ರಿ ಉತ್ಸವದ ಅಂಗವಾಗಿ ರಾಯಬಾಗ ಪಟ್ಟಣದ ಶ್ರೀ ಅಂಬಾಭವಾನಿ ಹಾಗೂ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಶಕ್ತಿ ದೇವತೆ  ತಾಲ್ಲೂಕಿನ ಚಿಂಚಲಿ ಮಾಯಕ್ಕಾದೇವಿಯ ಉತ್ಸವ ಇದೇ 16ರಂದು ಮಂಗಳವಾರದಿಂದ ಅ.24ರವರೆಗೆ ನವರಾತ್ರಿ ಉತ್ಸವ ವಿಜೃಂಭಣೆಯಿದ ಜರುಗಲಿದೆ.

ಮಂಗಳವಾರ ಘಟಸ್ಥಾಪನೆ ಮಾಡಲಾಗುವುದು. ಒಂಬತ್ತು ದಿನ ಹಗಲು ರಾತ್ರಿ ಅಖಂಡ ಜ್ಯೋತಿ ಹಚ್ಚಲಾಗುವುದು. ಅದರಲ್ಲೂ ಚಿಂಚಲಿಯ ಮಾಯಕ್ಕಾ ದೇವಿಯ ವೈಶಿಷ್ಟ್ಯ ಎಂದರೆ ಸರ್ವ ಧರ್ಮೀಯರೂ ಜಾತಿ ಭೇದ ಮರೆತು ನವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ನವರಾತ್ರಿ ಸಮಯದಲ್ಲಿ ದೇವಿಯನ್ನು ಒಂದೊಂದು ದಿನ ಒಂದೊಂದು ವಾಹನದ ಮೇಲೆ ಕೂರಿಸಿ  ಅಲಂಕರಿಸಿ, ಶೃಂಗರಿಸಿ ಪೂಜೆ ಮಾಡುವರು.

ನವರಾತ್ರಿ ಕೊನೆ ದಿನ ದಸರೆಯಂದು ದೇವಿಯ ಪಾಲಕಿ ಉತ್ಸವ ನೆರವೇರುವುದು. ದೇವಸ್ಥಾನದಿಂದ ಹಾಲಹಳ್ಳದವರೆಗೆ ನಡೆಸಿ ಸಂಜೆ ಬನ್ನಿ ಮುಡಿಯಲಾಗುವುದು. ರಾತ್ರಿ ಬಣ್ಣ ಬಣ್ಣದ ಸುಡುಮದ್ದು ಸುಡಲಾಗುವುದು.

ನವರಾತ್ರಿ ಸಮಯದಲ್ಲಿ ಸಾಂಗಲಿ ಮಿರಜ್, ಮುಂಬಯಿ. ಕೊಲ್ಹಾಪುರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುವರು.

ರಾಯಬಾಗದಲ್ಲಿ ವಿಜಯಲಕ್ಷ್ಮಿ: ಅದೇ ರೀತಿ ರಾಯಬಾಗ ಪಟ್ಟಣದಲ್ಲಿ ಕೊನೆಯ ದಿನ ವಿಜಯಲಕ್ಷ್ಮಿ ರೂಪದಲ್ಲಿ ಅಂಬಾ ಭವಾನಿಗೆ ಅಲಂಕಾರ ಮಾಡಲಾಗುವುದು. ಸಂಜೆ ದೇವಿಯ ಪಾಲಕಿ ಉತ್ಸವ. ಸಕಲ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಹನುಮಾನ ಮಂದಿರದ ಬನ್ನಿ ಮಂಟಪಕ್ಕೆ ಕರೆತಂದು ಬನ್ನಿ ಮುಡಿಯಲಾಗುವುದು.

ತೆಲಸಂಗ ಹಿರಿಯ ಮಠದಲ್ಲಿ ವಿಜಯದಶಮಿ
ತೆಲಸಂಗ : ಗ್ರಾಮದ ಹಿರಿಯ ಮಠದಲ್ಲಿ ವಿಜಯ ದಶಮಿ ನಿಮಿತ್ತ ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನ ಮಠದ 13 ನೇ ಪಟ್ಟಾಧ್ಯಕ್ಷರಾದ ಜಗದ್ಗುರು ಫಕೀರ್ ಸಿದ್ಧರಾಮ ಸ್ವಾಮೀಜಿ  ಸಾನ್ನಿಧ್ಯದಲ್ಲಿ ಹಾಗೂ ಉತ್ತರಾಧಿಕಾರಿಗಳಾದ ವೀರೇಶ್ವರ ದೇವರು ಹಿರೇಮಠ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇದೇ16ರಿಂದ ಅ. 24ರವರೆಗೆ ಕಲ್ಲೂರ ಗ್ರಾಮದ ಸಿದ್ಧರಾಮ ದೇವರುಗಳಿಂದ ಪ್ರತಿದಿನ ಸಂಜೆ 7.30ಕ್ಕೆ  ಹಿರಿಯ ಮಠದಲ್ಲಿ ಶ್ರೀ ಶರಣ ಚರಿತಾಮೃತ ಪ್ರವಚನ ನಡೆಯಲಿದೆ.

ಪ್ರತಿದಿನ ಸಂಜೆ 6.30 ರಿಂದ 7.30 ರ ವರೆಗೆ ತೆಲಸಂಗದ ಬಸವೇಶ್ವರ ಭಜನಾ ಸಂಘದಿಂದ ಭಜನೆ ನಡೆಯಲಿದೆ.

22ರಂದು ಮಧ್ಯಾಹ್ನ ಗಣಾರಾಧನೆ ನಡೆಯಲಿದೆ. ಅಂದು ಸಂಜೆ ತ್ರಿವಿಧ ದಾಸೋಹ ಮೂರ್ತಿಗಳಾದ ಅಖಿಲ ಭಾರತ ಶಿವಾನುಭವ ಸಂಸ್ಥೆಯ ಸಂಸ್ಥಾಪಕರಾದ ಮುರುಘಾ ಮಠದ ಲಿಂಗೈಕ್ಯ ಮೃತ್ಯುಂಜಯ ಸ್ವಾಮೀಜಿ ಪುಣ್ಯತಿಥಿ ಆಚರಿಸುವ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ವಚನ ಸ್ಪರ್ಧೆ, ಹಾಗೂ ಮೃತ್ಯುಂಜಯ ಸ್ವಾಮೀಜಿ ಕುರಿತು ಭಾಷಣ ಸ್ಪರ್ಧೆ ಮತ್ತು ಉಪನ್ಯಾಸ ನಡೆಯಲಿದೆ.

ಕೊನೆಯ ದಿನ 24ರಂದು ಸುಮಂಗಲೆಯರು, ಮುತ್ತೈದೆಯರ ಪೂಜೆ ಹಾಗೂ ಜಂಗಮ ಸಂತಪ್ತಿಯೊಂದಿಗೆ ನವರಾತ್ರಿ ಮಹೋತ್ಸವ ಮುಕ್ತಾಯಗೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT