ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಏ.11ರ ವರೆಗೆ ಮತಚೀಟಿ ವಿತರಣೆ

Last Updated 9 ಏಪ್ರಿಲ್ 2014, 7:19 IST
ಅಕ್ಷರ ಗಾತ್ರ

ಚಿಂಚೋಳಿ: ’ಚುನಾವಣಾ ಆಯೋಗ­ದಿಂದ ಏ.8ರಿಂದ 11ವರೆಗೆ ಮತ­ದಾರರ ಚೀಟಿಗಳ ವಿತರಣೆ ನಡೆ­ಯಲಿದೆ. ಕಣದಲ್ಲಿ ಇರುವ ಅಭ್ಯರ್ಥಿ­ಗಳಿಗೆ ಮತ ನೀಡಲು ಇಷ್ಟವಿಲ್ಲದವರು ಮತಯಂತ್ರದಲ್ಲಿ ನೋಟಾ ಮುಂದಿನ ನೀಲಿ ಬಟನ್‌ ಒತ್ತುವ ಸೌಲಭ್ಯ ವಿರುವುದನ್ನು ಮತ­ದಾರರ ಗಮನಕ್ಕೆ ತರ­ಬೇಕು’ಎಂದು ಸಹಾಯಕ ಚುನಾವ­ಣಾಧಿಕಾರಿ ಮಂಜು­ನಾಥ ತಿಳಿಸಿದರು.

ಸೋಮವಾರ ಇಲ್ಲಿನ ಸಿ.ಬಿ.­ಪಾಟೀಲ ಪದವಿ ಕಾಲೇಜಿನಲ್ಲಿ ನಡೆದ ಬಿಎಲ್‌ಒಗಳಿಗೆ ಪ್ರತಿಜ್ಞಾವಿಧಿ ಬೋಧನೆ ಮತ್ತು ಮತಗಟ್ಟೆಯ ಮತ­ದಾರರ ಚೀಟಿಗಳ ವಿತರಣೆ ಕಾರ್ಯ­ಕ್ರ­ಮದಲ್ಲಿ ಮಾತನಾಡಿದರು.

’ಅಂಗನವಾಡಿ ಕಾರ್ಯಕರ್ತೆ­ಯರಾದ ಬಿಎಲ್‌ಒಗಳು ನಿತ್ಯ ಹಂಚಿಕೆ ಮಾಡಿದ ಮತದಾರರ ಚೀಟಿಗಳ ವಿವರವನ್ನು ಗ್ರಾಮ ಲೆಕ್ಕಾಧಿಕಾರಿ ಇಲ್ಲವೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೀಡಬೇಕು. ಕೊನೆಯ­ದಾಗಿ ಏ.11 ರಂದು ಸಂಜೆ 5 ಗಂಟೆಯವರೆಗೆ ಇವುಗಳನ್ನು ವಿತರಿಸಿ, ಉಳಿದ ಚೀಟಿಗಳು ಹಿಂತಿರುಗಿಸಬೇಕು ಮತ್ತು ಅವುಗಳಿಗೆ ಕಾರಣವನ್ನು ನೀಡಬೇಕು’ ಎಂದು ತಿಳಿಸಿದರು.

’ವಲಸೆ, ಸ್ಥಳಾಂತರ, ಮರಣ, ದ್ವಿಮುದ್ರಣದ ಮತಚೀಟಿ ಮರಳಿ­ಸಬೇಕು. ಮತದಾರರು ಬಿಎಲ್‌ಒಗಳು ನೀಡಿದ ಮತದಾರರ ಚೀಟಿಯೊಂದಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡ­ಬ­ಹುದು. ಅಲ್ಲಿ ಮತದಾರರ ಚೀಟಿಯ ಜರಾಕ್ಸ್‌ ಬಳಸುವಂತಿಲ್ಲ’ ಎಂದರು. 
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾ­ಯತ್‌ ರಾಜ್‌ ಇಲಾಖೆ ಆಯುಕ್ತರಾದ ಬೀದರ್‌ ಲೋಕಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕ ಮತಿ­ವಣ್ಣನ್‌, ವೀಕ್ಷಕ ಎ.ಬಿ.­ದೇಶಪಾಂಡೆ, ಪ್ರಾಚಾರ್ಯ ಜಿ.ಜಿ.­ಗೌಡಪಗೋಳ್‌, ತಹಶೀಲ್ದಾರ ಮೋಹನ ಜೋಷಿ, ತಾ.ಪಂ. ಕಾರ್ಯ­ನಿರ್ವ­ಹಣಾಧಿಕಾರಿ ಸುಭಾಷ್ಚಂದ್ರ ಟಕ್ಕಳಕಿ, ಪ.ಪಂ. ಮುಖ್ಯಾಧಿಕಾರಿ ಮನೋ­ಜಕುಮಾರ ಗುರಿಕಾರ ಮೊದಲಾದವರು ಇದ್ದರು.

ಬಿಎಲ್‌ಒಗಳ ಅಳಲು:’ನಮಗೆ ನೀಡಿದ ಮತದಾರರ ಚೀಟಿಗಳಲ್ಲಿ ಬದಲಾವ­ಣೆಗಳನ್ನು ಸರಿಯಾಗಿ ನಮೂದಿಸಿಲ್ಲ. ಮೃತರಾದ ತಂದೆಯ  ಹೆಸರು ತೆಗೆದುಹಾಕಲು ಕೋರಿದ್ದರೆ, ತಂದೆ ಮಗ ಇಬ್ಬರ ಹಸರುಗಳನ್ನು, ಗಂಡ ಮರಣ ಹೊಂದಿದ್ದರೆ ಗಂಡ –ಹೆಂಡತಿ ಇಬ್ಬರ ಹೆಸರುಗಳನ್ನು, ಅಣ್ಣನ ಹೆಸರು ತೆಗೆದುಹಾಕಲು ಕೋರಿದ್ದರೆ ಅಣ್ಣತಮ್ಮ – ಇಬ್ಬರ ಹೆಸರುಗಳನ್ನು ತೆಗೆದು­ಹಾಕಲಾಗಿದೆ . ಇದರಿಂದ ಮತದಾರರ ಚೀಟಿಗಳನ್ನು ವಿತರಿ­ಸುವಾಗ ಜಗಳಗಳು ನಡೆಯುತ್ತಿವೆ’ ಹತ್ತಾರು ಬಿಎಲ್‌­ಒಗಳು ಅಳಲು ತೋಡಿಕೊಂಡರು.

ಮತಪತ್ರ ಜೋಡಣೆ:ಮತಯಂತ್ರಗಳಿಗೆ ಮತಪತ್ರ ಜೋಡಣೆಯನ್ನು ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ವೀಕ್ಷಕ ಮತಿವಣ್ಣನ್‌, ಸಹಾಯಕ ಚುನಾವ­ಣಾಧಿಕಾರಿ ಮಂಜು­ನಾಥ,ಎ.ಬಿ.­ದೇಶ­ಪಾಂಡೆ, ಸಂಪನ್ಮೂಲ ವ್ಯಕ್ತಿ ಮಲ್ಲಿ­ಕಾರ್ಜುನ ಪಾಲಾಮೂರು, ಮೋಹನ ಜೋಷಿ,  ಮೊದಲಾದವರ ಸಮ್ಮುಖ­ದಲ್ಲಿ ನಡೆಯಿತು. ಖಾಲಿದ್‌ ಅಹ್ಮದ್‌, ಶಮ್ಮಿ, ಕಂದಾಯ ನಿರೀಕ್ಷಕ ಸುಭಾಷ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT