ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: 25 ಕೋಟಿ ಕಾಮಗಾರಿ

Last Updated 5 ಫೆಬ್ರುವರಿ 2011, 6:10 IST
ಅಕ್ಷರ ಗಾತ್ರ

ಚಿಂತಾಮಣಿ: ವಿಶ್ವಬ್ಯಾಂಕ್ ಯೋಜನೆ, ಎಸ್‌ಎಫ್‌ಸಿ ಮುಖ್ಯ ಮಂತ್ರಿಗಳ ವಿಶೇಷ ಅನುದಾನ ಸೇರಿ ನಗರದಲ್ಲಿ ಸುಮಾರು ರೂ. 25 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. ನಗರದಲ್ಲಿ ಮೂರನೇ ಹಂತದ ಒಳ ಚರಂಡಿ ಯೋಜನೆಗೆ ರೂ. 6 ಕೋಟಿ ಮಂಜೂರಾಗಿದೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ಹೇಳಿದರು.

ಪಟ್ಟಣದ ಟಿಪ್ಪು ನಗರದಲ್ಲಿ ಮೂರನೇ ಹಂತದ ಒಳಚರಂಡಿ ಯೋಜನೆಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ನಗರದಲ್ಲಿ ಈಗಾಗಲೇ ಎರಡು ಹಂತಗಳ ಒಳಚರಂಡಿ ಯೋಜನೆ ಮುಕ್ತಾಯವಾಗಿದೆ. ಬಾಕಿ ಇರುವ ಪ್ರದೇಶಗಳಿಗೆ ಈ ಮೂರನೇ ಹಂತದ ಕಾಮಗಾರಿಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದರು.

ನಗರ ವ್ಯಾಪ್ತಿಯ ಕನಂಪಲ್ಲಿ, ಆಶ್ರಯ ಲೇಔಟ್, ತಿಮ್ಮಸಂದ್ರ, ಟಿಪ್ಪು ನಗರಗಳಲ್ಲಿ ಏಕಕಾಲಕ್ಕೆ ಕಾಮಗಾರಿ ಆರಂಭವಾಗುತ್ತಿದ್ದು, ಶೀಘ್ರ ಮುಕ್ತಾಯ ಮಾಡಲಾಗುವುದು.2009ರಿಂದಲೂ ಹಲವಾರು ಹಂತಗಳಲ್ಲಿ ಈ ಯೋಜನೆಗಾಗಿ ಶ್ರಮಿಸಿದ್ದು ಆರಂಭದಲ್ಲಿ 1.5 ಕೋಟಿಯಿಂದ ಈಗ 6.03 ಕೋಟಿಗೆ ಏರಿದೆ. ಒಳಚರಂಡಿಯ ನಂತರ ರಸ್ತೆಗಳ ಕಾಮಗಾರಿಯನ್ನು ಕೈಗೊಳ್ಳಲಾಗುವುದು.

ಯಾವುದೇ ಪ್ರಚಾರಕ್ಕೆ ಕಾಯದೆ ಕಾಮಗಾರಿಗಳಿಗೆ ಸರಳವಾಗಿ ಚಾಲನೆ ನೀಡಲಾಗುತ್ತಿದೆ. ಗುತ್ತಿಗೆದಾರರು 4 ಕಡೆ ಕಾಮಗಾರಿಯನ್ನು ಆರಂಭಿಸಬೇಕು. ಒಂದೇ ಬಾರಿ ಎಲ್ಲ ರಸ್ತೆಗಳನ್ನು ಅಗೆದು ಜನರಿಗೆ ತೊಂದರೆ ಕೊಡಬಾರದು. ಒಂದೊಂದು ರಸ್ತೆಯನ್ನು ಮುಕ್ತಾಯ ಮಾಡಿ ಮುಂದಿನ ರಸ್ತೆಗೆ ಹೋಗಬೇಕು ಎಂದು ಆದೇಶಿಸಿದರು.

ಮೂರನೇ ಹಂತದ ಒಳಚರಂಡಿ ಕಾಮಗಾರಿಗೆ ನಕ್ಷೆ ತಯಾರಿಸುವುದರಿಂದ ಹಿಡಿದು ವಿವಿಧ ಕಚೇರಿಗಳು ಹಾಗೂ ಸಚಿವ ಸಂಪುಟದವರೆಗೂ ಕಾಡಿಬೇಡಿ ಮಂಜೂರು ಮಾಡಿಸಿಕೊಳ್ಳಲಾಗಿದೆ. ಈ ಭಾಗದ ರಸ್ತೆಗಳನ್ನು ವಿಶ್ವಬ್ಯಾಂಕ್ ಯೋಜನೆಯಲ್ಲಿ ಸೇರಿಸದಿರುವುದಕ್ಕೆ ಒಳಚರಂಡಿ ಯೋಜನೆ ಕಾಮಗಾರಿ ತಡವಾದದ್ದು ಕಾರಣವಾಗಿದೆ ಎಂದರು.

ಮಂಡಳಿಯ ಎಇಇ ವೆಂಕಟೇಶ್ ಮಾತನಾಡಿ, ಚಿಂತಾಮಣಿಯಲ್ಲಿ ಒಳಚರಂಡಿ ಕಾಮಗಾರಿ ಶೀಘ್ರವಾಗಿ ನಡೆಯುತ್ತಿದ್ದು ಮೂರನೇ ಹಂತಕ್ಕೆ ತಲುಪಿದ್ದೇವೆ. ಶಾಸಕರ ಸತತ ಒತ್ತಡದಿಂದ ಈ ಕಾಮಗಾರಿ ಸಾಧ್ಯವಾಗಿದೆ. ನಗರದ ಹೊರವಲಯದ ಗೋಪಸಂದ್ರ ಕೆರೆಯಲ್ಲಿ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ. ಬುಕ್ಕನಹಳ್ಳಿ ಕೆರೆಯಲ್ಲಿ ಮತ್ತೊಂದು ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗುವುದು. ಚುನಾಯಿತ ಪ್ರತಿನಿಧಿಗಳ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷೆ ನಾಗರತ್ನಮ್ಮ, ಉಪಾಧ್ಯಕ್ಷ ಚೌಡರೆಡ್ಡಿ, ಮಾಜಿ ಅಧ್ಯಕ್ಷ ವೆಂಕಟರಮಣಸ್ವಾಮಿ, ನಗರಸಭಾ ಸದಸ್ಯರಾದ ಪ್ರಕಾಶ್, ವೆಂಕಟೇಶ್, ಶಿವಯ್ಯ ಸೇರಿದಂತೆ ಹಲವಾರು ನಗರಸಭಾ ಸದಸ್ಯರು, ಪೌರಾಯುಕ್ತ ರಾಮೇಗೌಡ, ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳಾದ ಶ್ರೀನಿವಾಸರೆಡ್ಡಿ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT