ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಅರಸಿನಕೆರೆ: ಕಾಲಭೈರವೇಶ್ವರ ಜಾತ್ರೆ ಆರಂಭ

Last Updated 22 ಏಪ್ರಿಲ್ 2013, 7:56 IST
ಅಕ್ಷರ ಗಾತ್ರ

ಭಾರತೀನಗರ: ಸಮೀಪದ ಚಿಕ್ಕಅರಸಿನಕೆರೆಯ ಕಾಲಭೈರವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಏ.21ರಿಂದ ಏ.28ರವರೆಗೆ ನಡೆಯಲಿದೆ.

ಏ.22ರಂದು ಬೆಳಿಗ್ಗೆ 6.30ಕ್ಕೆ ಅಗ್ನಿಕೊಂಡ, ಹೆಡಿಗೆಗಳ ಮೇಲೆ ಆರತಿ, ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ, ಅದೇ ದಿನ ಸಂಜೆ 6.30ಕ್ಕೆ ವೀರ ಆಂಜನೇಯಸ್ವಾಮಿ ಪಲ್ಲಕ್ಕಿ ಉತ್ಸವ, ರಾತ್ರಿ 8.30ಕ್ಕೆದಕ್ಷಯಜ್ಞ ಅಥವಾ ಬೃಗುಮುನಿಯ ಗರ್ವಭಂಗ ಎಂಬ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ.

ಏ.23ರ ಮಂಗಳವಾರ ಅರೆಕಲ್‌ದೊಡ್ಡಿ, ಬನ್ನಹಳ್ಳಿ ಹಾಗೂ ಹೊನ್ನಾಯಕನಹಳ್ಳಿ ಕುಲದವರಿಂದ ಮಧ್ಯಾಹ್ನ 2.30ಕ್ಕೆ ಅನ್ನ ಸಂತರ್ಪಣೆ, ನಂತರ ರಥೋತ್ಸವ, ಕಾರ್ಕಳ್ಳಿ ಬಸವೇಶ್ವರ, ದೊಡ್ಡಅರಸಿನಕೆರೆ ಏಳೂರಮ್ಮ, ಕಾಳಮ್ಮ, ಬುಳ್ಳಿಕೆಂಪನದೊಡ್ಡಿ ಗ್ರಾಮದ ನಿಶಾನಿ ದೇವರುಗಳ ಮೆರವಣಿಗೆ ಹಾಗೂ ಉತ್ಸವ, ಏ.24ರ ಬುಧವಾರ ಚಿಕ್ಕಅರಸಿನಕೆರೆ ಹಾಗೂ ಗುರುದೇವರಹಳ್ಳಿ ಗ್ರಾಮಗಳಲ್ಲಿ ಕಾಲಭೈರವೇಶ್ವರ ಸ್ವಾಮಿಯ ಓಕಳಿ ಸೇವೆ ಉತ್ಸವ,

ಏ.25ರ ಗುರುವಾರ ಹುಣ್ಣನದೊಡ್ಡಿ ಗ್ರಾಮದಲ್ಲಿ ಓಕಳಿ ಸೇವೆ ಉತ್ಸವ ಹಾಗೂ ಏ.28ರಂದು ಸಿದ್ದಭುಕ್ತಿ ಕಾರ್ಯಕ್ರಮವಿರುತ್ತದೆ. ಜಾತ್ರೆ ಅಂಗವಾಗಿ ಕಾಲಭೈರವ ಸ್ವಾಮಿಯ ಕ್ಷೇತ್ರದಲ್ಲಿ ಭಕ್ತರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT