ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಮುಂಗಾರು ಕಣ್ಣಾಮುಚ್ಚಾಲೆ

Last Updated 5 ಜುಲೈ 2012, 9:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಕಣ್ಣಾಮುಚ್ಚಾಲೆ ಆಡುತ್ತಿದೆ. ಕೆಲವು ದಿನಗಳ ಹಿಂದೆ ಮುಂಗಾರುಮಳೆ ಆರಂಭಗೊಳ್ಳುವ ಮುನ್ಸೂಚನೆ ನೀಡಿ ಮತ್ತೆ ಮರೆಯಾಗುತ್ತಿದೆ. ಆದರೆ ಬಿಸಿಲು ತಾಂಡವವಾಡುತ್ತಿದೆ.

ಜಿಲ್ಲೆಯ ಮಳೆನಾಡು ಭಾಗದಲ್ಲಿ ಕೆಲವು ವೇಳೆ ಮೋಡದ ಕವಿದ ವಾತಾವರಣ ಉಂಟಾದರೆ, ಮತ್ತೆ ತುಂತುರು ಮಳೆಯಾಗುತ್ತಿದೆ. ಸ್ವಲ್ಪ ಹೊತ್ತಿನಲ್ಲೆ ಬಿಸಿಲು ಬೀಳುತ್ತದೆ. ಇದೇ ವಾತಾವರಣ ಕಳೆದ ಮೂರು ದಿನಗಳಿಂದ ಮುಂದುವರೆಯುತ್ತಲೇ ಇದೆ.

ಸೋಮವಾರ ಜಿಲ್ಲೆಯಲ್ಲಿ 1037 ಮಿಲಿ ಮೀಟರ್ ಮಳೆಯಾದರೆ ಮರುದಿನ ಮಳೆ ಪ್ರಮಾಣ 882.1 ಮಿಲಿ ಮೀಟರ್‌ಗೆ ಕುಸಿಯಿತು. ಕಳೆದ 24 ಗಂಟೆಗಳಲ್ಲಿ 500 ಮಿಲಿ ಮೀಟರ್‌ಗೆ ಕ್ಷೀಣಿಸಿದೆ. ಕೊಟ್ಟಿಗೆಹಾರದಲ್ಲಿ ಗರಿಷ್ಟ 86 ಮಿಲಿ ಮೀಟರ್ ಮಳೆ ಬಿದ್ದಿದೆ.

ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಬುಧವಾರ ಬೆಳಿಗ್ಗೆ 8 ರವರೆಗೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಬಿದ್ದಿರುವ ಮಳೆ ವಿವರ ಮಿಲಿ ಮೀಟರ್‌ಗಳಲ್ಲಿ ಇಂತಿದೆ. ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆಯಲ್ಲಿ 1.1, ಜೋಳದಾಳ್ 3.6, ಅತ್ತಿಗುಂಡಿ 0.9, ಸಂಗಮೇಶ್ವರ ಪೇಟೆ 6, ಬ್ಯಾರುವಳ್ಳಿ 8.8, ಕೊಪ್ಪ19.6, ಹರಿಹರಪುರ 24.8, ಜಯಪುರ 4, ಕಮ್ಮರಡಿ 71.3, ಬಸರಿಕಟ್ಟೆ 11.9, ಮೂಡಿಗೆರೆ 33.9, ಜಾವಳಿ 7, ಗೋಣಿಬೀಡು 64, ಕಳಸ 31.6, ನರಸಿಂಹರಾಜಪುರ 13, ಬಾಳೆಹೊನ್ನೂರು 12.6, ಶೃಂಗೇರಿ 19, ಕಿಗ್ಗ 58.9, ಕೆರೆಕಟ್ಟೆ 22.6, ತರೀಕೆರೆ ಪಟ್ಟಣ 0.2 ಮತ್ತು ತ್ಯಾಗದಬಾಗಿಯಲ್ಲಿ 0.1 ಮಿಲಿ ಮೀಟರ್ ಮಳೆಯನ್ನು ಹೊರತು ಪಡಿಸಿದರೆ, ಉಳಿದ ಭಾಗ ಹಾಗೂ ಕಡೂರು ತಾಲ್ಲೂಕಿನಲ್ಲಿ ಮಳೆಯೇ ಆಗಿಲ್ಲ.

ಮಂಗಳವಾರ ಜಿಲ್ಲೆಯಲ್ಲಿ ಒಟ್ಟು 882.1ಮಿಲಿ ಮೀಟರ್ ಮಳೆಯಾದರೆ, ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆಯಲ್ಲಿ  ಗರಿಷ್ಟ113.2 ಮಿಲಿ ಮೀಟರ್ ಮಳೆಬಿದ್ದಿದೆ. ಚಿಕ್ಕಮಗಳೂರು ನಗರ 1.4, ವಸ್ತಾರೆ 8.2, ಜೋಳದಾಳ್ 8, ಆಲ್ದೂರು 16.3, ಕೆ.ಆರ್. ಪೇಟೆ 6, ಅತ್ತಿಗುಂಡಿ 11.5, ಸಂಗಮೇಶ್ವರಪೇಟೆ 24, ಬ್ಯಾರುವಳ್ಳಿ21.3, ಮಳಲೂರು 7.6, ದಾಸರಹಳ್ಳಿ 2, ಕಡೂರು ಪಟ್ಟಣ 2.4,ಸಖರಾಯಪಟ್ಟಣ 6.6,ಬೀರೂರು 0.6, ಎಮ್ಮೆದೊಡ್ಡಿ 17, ಕೊಪ್ಪ 32,ಹರಿಹರಪುರ 39.4, ಜಯಪುರ  48, ಕಮ್ಮರಡಿ  66.5, ಬಸರಿಕಟ್ಟೆ 32.8, ಮೂಡಿಗೆರೆ 38.5, ಕೊಟ್ಟಿಗೆಹಾರ 70, ಜಾವಳಿ 29.5, ಗೋಣಿ ಬೀಡು  24.4, ಕಳಸ 40.8, ನರಸಿಂಹರಾಜಪುರ 21.8, ಬಾಳೆಹೊನ್ನೂರು 25, ಮೇಗರಮಕ್ಕಿ 8, ಶೃಂಗೇರಿ 41.3, ಕಿಗ್ಗ 41.3, ತರೀಕೆರೆ ಪಟ್ಟಣ 4.8, ಲಕ್ಕವಳ್ಳಿ 4.7, ಅಜ್ಜಂಪುರ 2.4, ಶಿವನಿ 2.2, ಬುಕ್ಕಾಂಬೂದಿ 0.1, ಲಿಂಗದಹಳ್ಳಿ 0.7, ತಣಿಗೆಬೈಲು 5, ಉಡೇವಾ 1, ತ್ಯಾಗದಬಾಗಿ 4.2, ಹುಣಸಘಟ್ಟ 3.3, ರಂಗೇನಹಳ್ಳಿಯಲ್ಲಿ 3.8 ಮಿಲಿಮೀಟರ್ ಮಳೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT