ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮ್ಮನ ಹಬ್ಬ, ಹೊರಬೀಡು ಸಂಭ್ರಮ

Last Updated 2 ಜೂನ್ 2011, 10:10 IST
ಅಕ್ಷರ ಗಾತ್ರ

ಅರಕಲಗೂಡು: ಪಟ್ಟಣದ ಗ್ರಾಮ ದೇವತೆ ದೊಡ್ಡಮ್ಮ ದೇವಿಯ ಜಾತ್ರೆ ಅಂಗವಾಗಿ ನಡೆದ ಚಿಕ್ಕಮ್ಮನ ಹಬ್ಬ ಹಾಗೂ ಹೊರಬೀಡು ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಚಿಕ್ಕಮ್ಮನ ಹಬ್ಬದ ಅಂಗವಾಗಿ ಸೋಮವಾರ ರಾತ್ರಿ ತಿದ್ದಮ್ಮನ ಉತ್ಸವ ನಡೆಯಿತು. ಗ್ರಾಮಕ್ಕೆ ರೋಗ ರುಜಿನಗಳು ಬಾರದಂತೆ ಹಾಗೂ ಇಲ್ಲಿನ ದುಷ್ಟ ಶಕ್ತಿಗಳನ್ನು ಹೊರ ಹಾಕುವುದರ ಸಂಕೇತವಾಗಿ ಮಣ್ಣಿನಲ್ಲಿ ಮಾಡಿದ ತಿದ್ದಮ್ಮನ ಗೊಂಬೆಯನ್ನು ಮೆರವಣಿಗೆ ಮಾಡಿ ಗ್ರಾಮದ ಗಡಿ ದಾಟಿಸಿ ಎಡೆ ಇಟ್ಟು ಬರಲಾಯಿತು.

ಮಂಗಳವಾರ ಹೊರಬೀಡು ಕಾರ್ಯಕ್ರಮ  ಆಚರಿಸಲಾಯಿತು. ಈ ದಿನ ಗ್ರಾಮದ ಯಾವುದೆ ಮನೆಯಲ್ಲಿ ಒಲೆ ಹಚ್ಚಿ ಅಡಿಗೆ ಮಾಡುವಂತಿಲ್ಲ. ಎಲ್ಲ ಜನರೂ ಗ್ರಾಮದ ಹೊರಕ್ಕೆ ತೆರಳಿ ಅಡಿಗೆ ಮಾಡಿ ಊಟ ಮಾಡಬೇಕು. ಇದೊಂದು ರೀತಿಯ ಪಿಕ್ನಿಕ್ ಇದ್ದಂತೆ. ಬೆಳಿಗ್ಗೆಯಿಂದಲೆ ಜನರು ತಮ್ಮ ಕುಟುಂಬದ ಸದಸ್ಯರು, ನೆಂಟರಿಷ್ಟರೊಡನೆ ಅಡಿಗೆ ಪದಾರ್ಥಗಳೊಂದಿಗೆ ಗ್ರಾಮದ ಹೊರವಲಯಕ್ಕೆ ತೆರಳಿದರು.

ತೋಟ, ಹೊಲ, ಗದ್ದೆ, ದೇವಾಲಯಗಳ ಆವರಣದಲ್ಲಿ ಬೀಡು ಬಿಟ್ಟು ಅಡಿಗೆ ತಯಾರಿಸಿ ಸವಿದರು.ನೆಂಟರಿಷ್ಟರೊಡನೆ ವಿವಿಧ ಕ್ರೀಡೆ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿ ಸಂತೋಷಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT