ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕರಂಗಪ್ಪ ಚಾಂಪಿಯನ್

Last Updated 6 ಫೆಬ್ರುವರಿ 2011, 17:00 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಸಲದ ಚಾಂಪಿಯನ್ ಆಗಿದ್ದ ಸ್ಥಳೀಯ ಪ್ರತಿಭೆ ಚಿಕ್ಕರಂಗಪ್ಪ ಅವರು ಇಲ್ಲಿ ಮುಕ್ತಾಯ ವಾದ 110ನೇ ಅಖಿಲ ಭಾರತ ಅವೆು ಚೂರ್ ಚಾಂಪಿಯನ್‌ಷಿಪ್‌ನಲ್ಲಿ ಮತ್ತೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಕರ್ನಾಟಕ ಗಾಲ್ಫ್‌ಸಂಸ್ಥೆ (ಕೆಜಿಎ) ಕೋರ್ಸ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ಥಳೀಯ ಆಟಗಾರ ಚಿಕ್ಕರಂಗಪ್ಪ ಅವರು ಪ್ರೀತಮ್ ಹರಿದಾಸ್ ಅವರನ್ನು ಮಣಿಸುವ ಮೂಲಕ ಮತ್ತೆ ಪ್ರಶಸ್ತಿಯ ಗರಿಯನ್ನು ತಮ್ಮದಾಗಿಸಿಕೊಂಡರು.

ಫೈನಲ್‌ನಲ್ಲಿ 12 ಕ್ಲಬ್‌ಗಳನ್ನು ನಿಖರವಾಗಿ ಬೀಸಿದ ಚಿಕ್ಕರಂಗಪ್ಪ ಎದುರಾಳಿ ಆಟಗಾರನಿಗೆ ಪ್ರಬಲ ಪೈಪೋಟಿ ಒಡ್ಡಿದರು. ಸೆಮಿಫೈನಲ್ ಪಂದ್ಯದಲ್ಲಿ ಚಿಕ್ಕರಂಗಪ್ಪ ಅವರು ಎನ್. ತಂಗರಾಜ್ ಅವರನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರು. ‘ಈ ಸಲ ಪ್ರಶಸ್ತಿ ಗೆದ್ದಿರುವುದು ಸಂತೋಷ ನೀಡಿದೆ. ಫೈನಲ್‌ನಲ್ಲಿನ ನನ್ನ ಪ್ರದರ್ಶನ ಸಾಕಷ್ಟು ತೃಪ್ತಿ ನೀಡಿತು’ ಎಂದು ಚಿಕ್ಕರಂಗಪ್ಪ ಪ್ರತಿ ಕ್ರಿಯಿಸಿದರು’.

ಇದೇ ಕೋರ್ಸ್‌ನಲ್ಲಿ ನಡೆಯುತ್ತಿ ರುವ 94ನೇ ಮಹಿಳಾ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ದೆಹಲಿಯ ಗೌರಿ ಮೊಂಗಾ ಅವರು ಪ್ರಶಸ್ತಿಯನ್ನು ಗೆದ್ದುಕೊಂಡರು. ಕಳೆದ ಬಾರಿಯ ಚಾಂಪಿಯನ್ ಆಗಿದ್ದ ಶ್ರೇಯಾ ಘೈ ಅವರನ್ನು 2 ಮತ್ತು 1ರಲ್ಲಿ ಮಣಿಸಿ ಪ್ರಶಸ್ತಿಯನ್ನು ಮಡಿಗೇರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT