ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪಹಾರಿ ಕಡಾಂಬಿ

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಪ್ರಾಕೃತಿಕ ಸಿರಿಯ ಆಕರ್ಷಣೆಗಳಲ್ಲಿ ಒಂದು ಕಡಾಂಬಿ ಫಾಲ್ಸ್. ಹಸಿರು ಪರಿಸರದ ಪ್ರಭಾವಳಿ ಹಾಗೂ ಗಾಂಭೀರ್ಯದಿಂದ ಕಡಾಂಬಿ ಜಲಪಾತ ಸಹೃದಯರ ಮನಸೂರೆಗೊಳ್ಳುತ್ತದೆ.

ಸಮೃದ್ಧ ಹುಲ್ಲುಗಾವಲು ಮತ್ತು ದಟ್ಟ ಅರಣ್ಯ ಪ್ರದೇಶ ಕುದುರೆಮುಖದ ಸಹಜ ಚಿತ್ರಗಳು. ಇಂತಹ ಸಗ್ಗದ ಸಿರಿಯ ಮಡಿಲಲ್ಲಿ ಸದ್ದಿಲ್ಲದೇ ಕಣ್ಣುಕುಕ್ಕುವಂತೆ ಹರಿಯುವ ಜಲಪಾತ ಕಡಾಂಬಿ ಸಮುದ್ರ ಮಟ್ಟಕ್ಕಿಂತ ಸುಮಾರು ೧೮೯೨ ಮೀಟರ್ ಎತ್ತರದಲ್ಲಿದೆ. ವಿಶಾಲ ಬಂಡೆಗಳ ಕ್ಯಾನ್ವಾಸ್ನಲ್ಲಿ ಬಿನ್ನಾಣಗಿತ್ತಿಯಂತೆ ಧುಮ್ಮಿಕ್ಕುವ ಕಡಾಂಬಿ ಫಾಲ್ಸ್‌ಅನ್ನು ಕಣ್ತುಂಬಿಕೊಳ್ಳುವುದೇ ಒಂದು ವಿಶಿಷ್ಟ ಅನುಭವ.

ನೀರ ರಭಸದಲ್ಲಿ ಹಾಲ್ನೋರೆಯಂತೆ ಕಂಗೊಳಿಸುವ ಈ ಜಲಪಾತ ಕಂಗೊಳಿಸುತ್ತದೆ. ಕಡಾಂಬಿಯ ಭೋರ್ಗರೆತದಲ್ಲಿ ರೂಪುಗೊಳ್ಳುವ ತುಂತುರು ಹನಿಗಳು, ಬೀಸುವ ಕುಳಿರ್ಗಾಳಿ, ಮುಂಜಾನೆಯ ಇಬ್ಬನಿ– ಹೀಗೆ, ಆ ಪರಿಸರದ ಸೌಂದರ್ಯಕ್ಕೆ ಹಲವು ಕವಲುಗಳು. ಇವೆಲ್ಲದರ ಜೊತೆಗೆ ಹಕ್ಕಿಗಳ ಚಿಲಿಪಿಲಿ ಮೇಳವೂ ಸೇರಿಕೊಳ್ಳುತ್ತದೆ.

ಅಂದಹಾಗೆ ಇಲ್ಲಿ ಸಿಂಹ ಬಾಲದ ಕೋತಿಗಳು ಕಂಡುಬರುವುದು ವಿಶೇಷ. ಮುಖ್ಯರಸ್ತೆಗೆ ಸನಿಹದಲ್ಲೇ ಈ ಜಲಪಾತ ಸಿಗುವುದರಿಂದ ಇದರ ವೀಕ್ಷಣೆಗಾಗಿ ಸಹೃದಯರು ಶ್ರಮಪಡುವ ಅಗತ್ಯವಿಲ್ಲ. ಮೇ ತಿಂಗಳಿನಿಂದ ಅಕ್ಟೋಬರ್ ನಡುವಿನ ಅವಧಿ ಕಡಾಂಬಿ ನೋಡಲಿಕ್ಕೆ ಹೇಳಿಮಾಡಿಸಿದ ಸಮಯ. ಈಗ ಮುಂಗಾರಿನ ವಿಲಾಸದ ಸಮಯದಲ್ಲಿ ಕಡಾಂಬಿ ಪೂರ್ಣ ಪ್ರಮಾಣದಲ್ಲಿ ಮೈದುಂಬಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT