ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ಪ್ರದರ್ಶನಕ್ಕೆ ನಿರ್ಬಂಧ

Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಲ್ಲಿಯ ಅಮೆರಿಕನ್‌ ಸೆಂಟರ್‌ನಲ್ಲಿ ಪರವಾನಗಿ ಇಲ್ಲದೆಯೇ ಚಿತ್ರ ಪ್ರದರ್ಶಿಸುತ್ತಿ ರುವು­ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಇದೇ 20ರೊಳಗೆ ಪ್ರದರ್ಶನ ನಿಲ್ಲಿಸಲು ಅಮೆರಿಕದ ರಾಯಭಾರ ಕಚೇರಿಗೆ ಗಡುವು ವಿಧಿಸಿದೆ.

ದೇವಯಾನಿ ಖೋಬ್ರಾಗಡೆ ಬಂಧನ­ದ ಹಿನ್ನೆಲೆಯಲ್ಲಿ ಅಮೆರಿಕದ ಮೇಲೆ ಒತ್ತಡ ಹೇರಲು ಭಾರತದ ಮುಂದುವರಿದ ಕ್ರಮ ಇದಾಗಿದೆ ಎನ್ನಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಆಹ್ವಾನಿತರಿಗಾಗಿ ಅಮೆರಿಕನ್‌ ಸೆಂಟರ್‌­ನಲ್ಲಿ ಚಿತ್ರಗಳನ್ನು ಪ್ರದರ್ಶಿಸ­ಲಾಗುತ್ತಿದೆ. ಇದು ಕಾನೂನು ಉಲ್ಲಂಘನೆಯಾಗಿದ್ದು, ಈ ಸಂಬಂಧ ಸರ್ಕಾರ ನೋಟಿಸ್‌ ನೀಡಿದೆ.

ಅಮೆರಿಕ ಮೂಲದ ಸಂಸ್ಥೆಗಳು ನವದೆಹಲಿಯಲ್ಲಿ ಅಕ್ರಮವಾಗಿ ನಡೆ­ಸುತ್ತಿರುವ ಚಟುವಟಿಕೆ ಮೇಲೆ ನಿಯಂತ್ರಣ ಹೇರಲು ಸರ್ಕಾರ ಮುಂದಾ­­ಗಿದ್ದು, ಇದೀಗ ಅಮೆರಿಕನ್‌ ಸೆಂಟರ್‌ ಮೇಲೆ ಕ್ರಮ ಜರುಗಿಸ­ಲಾಗು­ತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT