ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲೆಗೆ ವಿಶಿಷ್ಟ ಸ್ಥಾನ:ಪುತ್ತಿಗೆ ಶ್ರೀ

Last Updated 17 ಡಿಸೆಂಬರ್ 2012, 11:06 IST
ಅಕ್ಷರ ಗಾತ್ರ

ಕುಂದಾಪುರ: ಕಲಾಕಾರನನ್ನು ಸ್ವತಃ ಸಂತೃಪ್ತಿಗೊಳಿಸುವ ಚಿತ್ರಕಲೆಗೆ ಕಲಾ ಪ್ರಕಾರಗಳಲ್ಲಿ ಅತ್ಯಂತ ವಿಶಿಷ್ಟ ಸ್ಥಾನವಿದ್ದು,  ಕಲಾಕಾರನ ಮನಸ್ಸನ್ನು ತನ್ನತ್ತ ಸೆಳೆಯುವ ಕೆಲಸವನ್ನು  ಕಲೆ ಮಾಡುತ್ತದೆ ಎಂದು ಪುತ್ತಿಗೆ ಮಠದ ಮಠಾಧೀಶ ಸುಗಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಇಲ್ಲಿಗೆ ಸಮೀಪದ ಕುಂಭಾಸಿ ವಿನಾಯಕ ಸಭಾಗೃಹದಲ್ಲಿ ಆನೆಗುಡ್ಡೆ ಮಧುವನ ಆರಾಧನಾ ವೇದಿಕೆ ಆಶ್ರಯದಲ್ಲಿ ಪಂಡಿತ ವಿಶ್ವಂಭರ ಉಪಾಧ್ಯಾಯರ ಸಂಸ್ಮರಣೆ ಪ್ರಯುಕ್ತ ಶನಿವಾರ ನಡೆದ ಮರಳು ಶಿಲ್ಪ  ಮತ್ತು ಚಿತ್ರಕಲಾ ಪ್ರದರ್ಶನದ `ಕಲಾರಾಧನ-2012' ಉದ್ಘಾಟಿಸಿ ಅವರು ಮಾತನಾಡಿದರು.

ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕಲಾ ಲಲಿತಾಕಲಾ ಅಕಾಡೆಮಿ ಸದಸ್ಯ ಪುರಷೋತ್ತಮ ಅಡ್ವೆ,  ತ್ರಿವರ್ಣ ಕಲಾ ಕೇಂದ್ರದ ಮುಖ್ಯಸ್ಥ ಹರೀಶ್ ಸಾಗಾ ಉಪಸ್ಥಿತರಿದ್ದರು.

ಆರಾಧನ ವೇದಿಕೆಯ ಅಧ್ಯಕ್ಷ ಕೆ.ರವಿರಾಜ್ ಉಪಾಧ್ಯಾಯ ಸ್ವಾಗತಿಸಿದರು, ಮಹಿಮಾ ಪ್ರಾರ್ಥಿಸಿದರು, ಶಿಕ್ಷಕ ಶಶಿಕಾಂತ್ ಎಸ್ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT