ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೀಕರಣ ಮುಗಿಸಿದ ಕಠಾರಿವೀರ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಿರ್ಮಾಪಕ ಮುನಿರತ್ನ 15 ಕೋಟಿ ಖರ್ಚು ಮಾಡಿ ನಿರ್ಮಿಸುತ್ತಿರುವ 3ಡಿ ಸಿನಿಮಾ `ಕಠಾರಿವೀರ ಸುರಸುಂದರಾಂಗಿ~. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಒಂದೇ ಹಾಡು ಮಾತ್ರ ಬಾಕಿ ಉಳಿದಿದೆ. ಚಿತ್ರದಲ್ಲಿ ಹಿರಿಯ ನಟ ಅಂಬರೀಶ್ ಯಮರಾಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವಕನ್ಯೆಯಾಗಿ ನಟಿ ರಮ್ಯಾ ಮತ್ತು ಕಠಾರಿವೀರನಾಗಿ ಉಪೇಂದ್ರ ನಟಿಸಿದ್ದಾರೆ. ಬೆಂಗಳೂರು, ಮೈಸೂರು, ಹೈದರಾಬಾದ್‌ಗಳಲ್ಲಿ ಚಿತ್ರೀಕರಣ ನಡೆದಿದೆ.

ಉಪೇಂದ್ರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿದ್ದು, ವೇಣು ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ಚಿನ್ನಿ ಪ್ರಕಾಶ್ ನೃತ್ಯ, ಕಿರಣ್ ಕಲೆ, ಹರ್ಷ ಸಂಕಲನ, ರವಿವರ್ಮ ಸಾಹಸ ಇದೆ. ನಿರ್ದೇಶನ ಸುರೇಶ್ ಕೃಷ್ಣ ಅವರದು. ತಾರಾಗಣದಲ್ಲಿ ಶ್ರಿಧರ್, ದೊಡ್ಡಣ್ಣ, ಸಂಗೀತಾ, ಟೆನ್ನಿಸ್ ಕೃಷ್ಣ, ಚೇತನ್, ಸುಮನ್ ರಂಗನಾಥ್, ರಮಣಿತೋ ಚೌಧರಿ, ರಿಷಿಕಾ ಸಿಂಗ್ ಮುಂತಾದವರಿದ್ದಾರೆ. 
 

`ಸ್ಟೋರಿ-ಕಥೆ~ ಚಿತ್ರೀಕರಣ ಮುಕ್ತಾಯ
ಜಗದೀಶ್ ಕೆ.ಆರ್. ಕಥೆ, ಚಿತ್ರಕಥೆ, ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿರುವ ಚಿತ್ರ `ಸ್ಟೋರಿ-ಕಥೆ~. ಚಿತ್ರದ ಛಾಯಾಗ್ರಹಣ ಸತೀಶ್ ಕುಮಾರ್, ಸಂಕಲನ ಹರೀಶ್ ಕೊಡ್ಪಾಡಿ, ಸಂಗೀತ - ವಾಸು ದೀಕ್ಷಿತ್,  ಕಲೆ-ಬಾಬುಖಾನ್, ನೃತ್ಯ -ಹರಿಕೃಷ್ಣ, ನಿರ್ವಹಣೆ -ಥಾಮಸ್, ತಾರಾಗಣದಲ್ಲಿ ತಿಲಕ್ ಶೇಖರ್, ಪ್ರತಾಪ್ ನಾರಾಯಣ್, ನೇಹಾ ಪಾಟೀಲ್, ಪಾರ್ವತಿ ನಾಯರ್, ಮುಂತಾದವರ್ದ್ದಿದಾರೆ.
 

ಕೆಂಗೇರಿ ಬಳಿ `ಸ್ಲಂ~
ಪಿ. ಮೂರ್ತಿ ನಿರ್ಮಾಣದ `ಸ್ಲಂ~ ಚಿತ್ರಕ್ಕೆ ಕೆಂಗೇರಿ ಹಾಗೂ  ತಾವರೆಕೆರೆಯಲ್ಲಿ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಿತು. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಎಂ ಮಹೇಶ್ ಕುಮಾರ್ ಅವರದ್ದು. ಎಂ.ಎಸ್ ಛಾಯಾಗ್ರಹಣ, ಬಿ.ಆರ್. ಹೇಮಂತ ಕುಮಾರ್ ಸಂಗೀತ, ಹರೀಶ್ ಕೋಟ್ಪಾಡಿ ಸಂಕಲನ, ರೇವಣ್ಣ ನಾಯಕ್ ಸಾಹಿತ್ಯ, ಅಲ್ಟಿಮೇಟ್ ಶಿವು ಸಾಹಸ, ಜೀವನ್ ನೃತ್ಯ ಸಂಯೋಜಿಸಿದ್ದಾರೆ. ತಾರಾಗಣದಲ್ಲಿ ಮಯೂರ್, ಮೂರ್ತಿ, ದಿಶಾ ಪೂವಯ್ಯ, ನೇಹಾ ಪಾಟೀಲ್, ಅಚ್ಚುತರಾವ್, ಶೋಭರಾಜ್, ಹರಿ ಸಾಯ್, ಪೊಟ್ರೆ ನಾಗರಾಜ್, ಗುರುರಾಜ ಹೊಸಕೋಟೆ, ಶಿವಮಂಜು,  ಮಂಜು ನಾಗವಾರ, ದೊರೆ, ನಿತಿನ್ ಮುಂತಾದವರ್ದ್ದಿದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT