ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನಗದಲ್ಲಿ ಕುಷ್ಠ ರೋಗ ಪತ್ತೆ

Last Updated 22 ಜನವರಿ 2011, 8:35 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಕಸಬ ಹೋಬಳಿ ಚಿನಗ ಗ್ರಾಮದಲ್ಲಿ ಕುಷ್ಠರೋಗ ಪ್ರಕರಣ ಪತ್ತೆಯಾಗಿದೆ.ಈ ಹಿನ್ನೆಲೆಯಲ್ಲಿ ರೋಗದ ಹರಡುವಿಕೆ ತಡೆಗಟ್ಟಿ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಚಿನಗ ಗ್ರಾಮದಲ್ಲಿ ಗುರುವಾರ ಶ್ರೀದೇವಿ ಛಾರಿಟಬಲ್ ಟ್ರಸ್ಟ್, ಜಿಲ್ಲಾ ಕುಷ್ಠರೋಗ ನಿವಾರಣಾ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀದೇವಿ ನರ್ಸಿಂಗ್ ಕಾಲೇಜು ಆಶ್ರಯದಲ್ಲಿ ಕುಷ್ಠರೋಗ ನಿರ್ಮೂಲನಾ ಮಾಸಾಚರಣೆ’ ಕಾರ್ಯಕ್ರಮ ನಡೆಸಲಾಯಿತು.

ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ.ಪಾಳ್ಯ ಮೊಹಮದ್ ಮೊಹಿದ್ದೀನ್ ಮಾತನಾಡಿ, ಪಾವಗಡ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಹಾಗೂ ಚೆನ್ನೆನಲ್ಲಿ ಕುಷ್ಠರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುವ ಸೌಲಭ್ಯ ಇದೆ ಎಂದು ಹೇಳಿದರು.

ಹಿರಿಯ ವೈದ್ಯಕೀಯೇತರ ಮೇಲ್ವಿಚಾರಕ ಆರ್.ಕೃಷ್ಣಮೂರ್ತಿ ಕುಷ್ಠ ರೋಗದ ಬಗ್ಗೆ ಹೆದರಿಕೆ ಬೇಡ, ಎಚ್ಚರಿಕೆ ಅಗತ್ಯ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ರೋಗ ಬರುವ ಸಾಧ್ಯತೆ ಇದೆ ಎಂದರು.

ಚಿನಗ ಗ್ರಾ.ಪಂ. ಸದಸ್ಯ ಎಂ. ರಂಗಶಾಮಯ್ಯ, ಶ್ರೀದೇವಿ ಆಸ್ಪತ್ರೆ ಕೀಲು ಮತ್ತು ಮೂಳೆ ತಜ್ಞ ಡಾ.ವಿಜಯ್ ಆರ್.ತುಬಾಕಿ, ಶ್ರೀದೇವಿ ಛಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ಡಾ.ರಮಣ್ ಹುಲಿನಾಯ್ಕರ್, ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ನರ್ಸಿಂಗ್ ಕಾಲೇಜು ಪ್ರಾಚಾರ್ಯ ಪ್ರೊ.ಕೆ.ರಾಮು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಸ್.ಎ.ಪ್ರಿಯಾ ಮಾತನಾಡಿದರು. ಪ್ರಾಧ್ಯಾಪಕ ದಿವ್ಯದರ್ಶನ್ ಸ್ವಾಗತಿಸಿ ದರು. ಜೆ.ಶ್ರೀಧರ್ ವಂದಿಸಿದರು. ಎಚ್.ಕೆ.ಮಂಜುನಾಥ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT