ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಆಮದು ಸುಂಕ ಇಳಿಕೆ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೋಮವಾರ ಚಿನ್ನದ ಆಮದು ಸುಂಕವನ್ನು 10 ಗ್ರಾಂಗಳಿಗೆ 458 ಡಾಲರ್‌ಗಳಿಗೆ ತಗ್ಗಿಸಿದೆ. ಬೆಳ್ಳಿ ಆಮದು ದರ ಕೂಡ ಕೆ.ಜಿಗೆ 783 ಡಾಲರ್‌ಗಳಿಗೆ ಇಳಿದಿದೆ.  ಈ ಮೊದಲು ಚಿನ್ನಕ್ಕೆ 461 ಡಾಲರ್ ಮತ್ತು ಬೆಳ್ಳಿಗೆ 803 ಡಾಲರ್ ಆಮದು ಸುಂಕ ವಿಧಿಸಲಾಗುತ್ತಿತ್ತು.

`ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಸತತ ಇಳಿಕೆ ಕಂಡಿದೆ.  ಈ ಹಿನ್ನೆಲೆಯಲ್ಲಿ ಆಮದು ಸುಂಕ ತಗ್ಗಿಸಲಾಗಿದೆ' ಎಂದು ಕೇಂದ್ರ ಅಬಕಾರಿ ಮತ್ತು ಸೀಮಾಸುಂಕ ಮಂಡಳಿ  ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವಾರಾಂತ್ಯದಲ್ಲಿ ಇಲ್ಲಿನ ಚಿನಿವಾರ ಪೇಟೆಯಲ್ಲಿ ಸ್ಟ್ಯಾಂಡರ್ಡ್ ಚಿನ್ನದ ಧಾರಣೆ 10 ಗ್ರಾಂಗಳಿಗೆ ದಾಖಲೆ ಮಟ್ಟವಾದ ರೂ34,500ಕ್ಕೆ ಏರಿಕೆ ಕಂಡಿತ್ತು. ಆದರೆ, ನಂತರ ರೂ31,000 ಮಟ್ಟಕ್ಕೆ ಕುಸಿತ ಕಂಡಿದೆ.

ಸಿಂಗಪುರ ಮಾರುಕಟ್ಟೆಯಲ್ಲಿ ಸಹ ಬಂಗಾರದ ಬೆಲೆ ಸೋಮವಾರ ಶೇ 1.6ರಷ್ಟು ಕುಸಿತ ಕಂಡು 1,373 ಡಾಲರ್‌ಗಳಿಗೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT