ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ; ದೆಹಲಿ ರೂ,. 270, ಮುಂಬೈ ರೂ.145 ಏರಿಕೆ

Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ(ಪಿಟಿಐ): ದೇಶದ ಚಿನಿವಾರ ಪೇಟೆಗಳಲ್ಲಿ ಶುಕ್ರವಾರ ಚಿನ್ನದ ಧಾರಣೆ ರೂ.145ರಿಂದ ರೂ.270ರವರೆಗೂ ಏರಿಕೆ ಕಂಡಿತು. ಸಿದ್ಧ ಬೆಳ್ಳಿ ದೆಹಲಿಯಲ್ಲಿ ರೂ.295ರಷ್ಟು ಏರಿದರೆ, ಮುಂಬೈನಲ್ಲಿ ರೂ.50ರಷ್ಟು ಇಳಿಕೆಯಾಯಿತು.

ನವದೆಹಲಿ ಧಾರಣೆ
10 ಗ್ರಾಂ ಅಪರಂಜಿ ಚಿನ್ನ  ರೂ.275 ರಷ್ಟು ದುಬಾರಿಯಾಗಿ ರೂ.27,300 ರಲ್ಲೂ, ಸ್ಟ್ಯಾಂಡರ್ಡ್ ಚಿನ್ನ ರೂ.27,100 ರಲ್ಲೂ ವಹಿವಾಟು ನಡೆಸಿತು. ಸಿದ್ಧ ಬೆಳ್ಳಿ ಕೆ.ಜಿ.ಗೆ ರೂ.295ರಷ್ಟು ಬೆಲೆ ಹೆಚ್ಚಿಸಿ ಕೊಂಡು ರೂ.40,730ಕ್ಕೇರಿತು.

ಮುಂಬೈ ಧಾರಣೆ
10 ಗ್ರಾಂ ಅಪರಂಜಿ ಚಿನ್ನ  ರೂ.135 ರಷ್ಟು ತುಟ್ಟಿಯಾಗಿ ರೂ.26,925ಕ್ಕೆ, ಸ್ಟ್ಯಾಂಡರ್ಡ್ ಚಿನ್ನ ರೂ.145ರಷ್ಟು ದುಬಾ ರಿಯಾಗಿ ರೂ.26,795ಕ್ಕೆ ಬೆಲೆ ಹೆಚ್ಚಿಸಿ ಕೊಂಡಿತು. ಸಿದ್ಧ ಬೆಳ್ಳಿ ಬೆಲೆ ರೂ.50 ತಗ್ಗಿ ಕೆ.ಜಿ.ಗೆ ರೂ.40,940ಕ್ಕೆ ಇಳಿಯಿತು.

ಲಂಡನ್ 3 ವಾರದ ಗರಿಷ್ಠ
ಅಮೆರಿಕ ಸರ್ಕಾರ ಆರ್ಥಿಕ ಸುಧಾರಣಾ ಕ್ರಮಗಳನ್ನು ಮುಂದುವರಿಸುವ ಸೂಚನೆ ಹೊರಹಾಕಿದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ಏರಿತು. ಲಂಡನ್ ಚಿನಿವಾರ ಪೇಟೆಯಲ್ಲಿ ಚಿನ್ನ ಔನ್ಸ್‌ಗೆ 1,300.88 ಡಾಲರ್‌ಗೇರಿತು. ಇದು ಕಳೆದ ಮೂರು ವಾರದ ಗರಿಷ್ಠ ಮಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT