ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ, ಬೆಳ್ಳಿ ಆಮದು ಇಳಿಕೆ

Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ಕೈಗೊಂಡ ಚಿನ್ನ-ಬೆಳ್ಳಿ ಆಮದು ನಿಯಂತ್ರಣ ಕ್ರಮಗಳೂ ಕಡೆಗೂ ಫಲಿತಾಂಶ ನೀಡಿವೆ. ಜೂನ್‌ನಲ್ಲಿ 245 ಕೋಟಿ ಡಾಲರ್ (ಅಂದಾಜು ರೂ.14,577 ಕೋಟಿ)ಮೌಲ್ಯದ ಚಿನ್ನ-ಬೆಳ್ಳಿ ಆಮದಾಗಿದೆ. ಇದು ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿನ ಆಭರಣ ಲೋಹಗಳ ಕಡಿಮೆ ಆಮದು ಪ್ರಮಾಣವಾಗಿದೆ.

ಇದರಿಂದಾಗಿ ಜೂನ್‌ನಲ್ಲಿ ದೇಶದ ಆಮದು-ರಫ್ತು ಅಂತರ ಪ್ರಮಾಣ 1220 ಕೋಟಿ ಡಾಲರ್(ರೂ.72,590 ಕೋಟಿ)  ಮಟ್ಟಕ್ಕೆ ತಗ್ಗಿದೆ. ಮೇ ತಿಂಗಳಲ್ಲಿ ದಾಖಲಾಗಿದ್ದ 2010 ಕೋಟಿ ಡಾಲರ್‌ಗಳಷ್ಟಿದ್ದ ಆಮದು-ರಫ್ತು ಅಂತರ ಕಳೆದ ಏಳು ತಿಂಗಳಲ್ಲಿಯೇ ಗರಿಷ್ಠ ಪ್ರಮಾಣದ್ದಾಗಿತ್ತು.

ಜೂನ್‌ನಲ್ಲಿ ಆಮದು ಪ್ರಮಾಣ ತಗ್ಗಿರುವುದು ಚಾಲ್ತಿ ಖಾತೆ ಕೊರತೆ(ಸಿಎಡಿ)ಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 4.8ಕ್ಕೆ  ಇಳಿಯುವಂತೆ ಮಾಡುವ ನಿರೀಕ್ಷೆ ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT